50 ವರ್ಷಗಳ ಸತತ ಪರಿಶ್ರಮಕ್ಕೆ ಸಿಕ್ತು ಪ್ರತಿಫಲ, ಚಂದ್ರನಿಂದ ತಂದ ಮಣ್ಣಿನಲ್ಲಿ ಸಸ್ಯ ಕೃಷಿ ಯಶಸ್ವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಪ್ರಕೃತಿ’ ಭೂಮಿಯ ಹೊರತಾಗಿ ಬೇರಾವ ಗ್ರಹದಲ್ಲಿಯೂ ಕಂಡುಬರದ ವೈಶಿಷ್ಟ್ಯ. ಹಸಿರು ಮರಗಳು, ನೀರು, ಜೀವ ಮುಂತಾದ ನೈಸರ್ಗಿಕ ಗುಣಗಳು ಭೂಮಿಯಲ್ಲಿ ಮಾತ್ರ ಇವೆ. ಆದರೆ ಭವಿಷ್ಯದಲ್ಲಿ ನಾವು ಭೂಮಿಯ ಬದಲಿಗೆ ಚಂದ್ರನ ಮೇಲೆ ಮರಗಳನ್ನು ನೋಡಬಹುದೇ? ಎಂಬುದು ವಿಜ್ಞಾನಿಗಳ ಸಂಶೋಧನೆಗೆ ಉತ್ತರ ಸಿಕ್ಕಿದೆ. ಚಂದ್ರನಿಂದ ತಂದ ಮಣ್ಣಿನಲ್ಲಿ ಸಸ್ಯಗಳನ್ನು ಬೆಳೆಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಭೂಮಿಯಾಚೆಗಿನ ಇತರ ಗ್ರಹಗಳಲ್ಲಿ ವಾಸಿಸುವ ಮಾನವಕುಲದ ಬಯಕೆಗೆ ಇದು ಒಂದು ದೊಡ್ಡ ಹೆಜ್ಜೆಯಾಗಿದೆ. ವಿಜ್ಞಾನಿಗಳು ಚಂದ್ರನ ಮೇಲ್ಮೈಯಲ್ಲಿರುವ ಮಣ್ಣಿಗೆ ‘ರೆಗೋಲಿತ್’ ಎಂದು ಹೆಸರಿಟ್ಟಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆರಂಭಿಸಿದ ಅಪೊಲೊ ಮಿಷನ್‌ನ ಭಾಗವಾಗಿ ಚಂದ್ರನ ಮೇಲೆ ಇಳಿದ ಸಮಯದಲ್ಲಿ ವಿಜ್ಞಾನಿಗಳು ‘ರೆಗೋಲಿತ್’ ಅನ್ನು ಭೂಮಿಗೆ ತಂದರು. ಸುಮಾರು ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳು ರೆಗೊಲಿತ್‌ನ ಸಾರವನ್ನು ಪರೀಕ್ಷಿಸಿದ್ದಾರೆ ಮತ್ತು ‘ಅರಾಬಿಡೋಪ್ಸಿಸ್ ಥಾಲಿಯಾನಾ’ ಎಂಬ ಸಸ್ಯವನ್ನು ಬೆಳೆಸಲು ಶ್ರಮಿಸಿದ್ದಾರೆ.

ಈ ಸಂಶೋಧನೆಯು ಅನ್ಯಲೋಕದ ಅನ್ವೇಷಣೆಯ ಗುರಿಗಳಿಗೆ ನಿರ್ಣಾಯಕವಾಗಿದೆ. ಭವಿಷ್ಯದ ಬಾಹ್ಯಾಕಾಶ ಗಗನಯಾತ್ರಿಗಳಿಗೆ ಆಹಾರ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಇತರ ಗ್ರಹಗಳ ಸಂಪನ್ಮೂಲಗಳನ್ನು ಬಳಸಬೇಕಾದ ಅಗತ್ಯವೇ ಇದಕ್ಕೆ ಕಾರಣ. ಈ ಮೂಲ ಸಸ್ಯ ಬೆಳವಣಿಗೆಯ ಸಂಶೋಧನೆಯು ಕೃಷಿ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲು ನಾಸಾ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳುತ್ತಾರೆ.

ಚಂದ್ರನ ಮೇಲಿನ ಮಣ್ಣು ಜ್ವಾಲಾಮುಖಿ ಬೂದಿಯಂತೆ ಇದೆ. ಅಂತಹ ಮಣ್ಣಿನಲ್ಲಿ ಸಸ್ಯಗಳು ಬೆಳೆಯುತ್ತವೆ ಎಂದು ವಿಜ್ಞಾನಿಗಳು ಊಹಿಸಲು ಸಾಧ್ಯವಾಗಲಿಲ್ಲ. ಕಳೆದ ಕೆಲವು ವರ್ಷಗಳಿಂದ ನಡೆಸಿದ ಪರೀಕ್ಷೆಗಳ ಆಧಾರದ ಮೇಲೆ, ನಿಯಂತ್ರಿತ ವಾತಾವರಣದಲ್ಲಿ ಗಾಳಿ, ಬೆಳಕು ನೀರನ್ನು ಒದಗಿಸುವ ಮೂಲಕ ಚಂದ್ರನ ರೆಗೊಲಿತ್‌ನಲ್ಲಿ ಸಸ್ಯಗಳನ್ನು ಯಶಸ್ವಿಯಾಗಿ ಬೆಳೆಸಬಹುದು ಎಂದು ಫ್ಲೋರಿಡಾ ವಿಶ್ವವಿದ್ಯಾಲಯದ ತೋಟಗಾರಿಕಾ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ರಾಬರ್ಟ್ ಪರ್ಲ್ ವಿವರಿಸಿದರು. ಈ ಸಂಶೋಧನೆಯಲ್ಲಿ ರಾಬರ್ಟ್ ಪ್ರಮುಖ ಪಾತ್ರ ವಹಿಸಿದ್ದಾರೆ. ಚಂದ್ರನ ಮಣ್ಣಿನಲ್ಲಿ ಸಸ್ಯ ಬೆಳೆವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಆಹಾರದ ಬೆಳೆಗಳನ್ನು ಬಾಹ್ಯಾಕಾಶದಲ್ಲಿ ಬೆಳೆಯುವ ಸಾಧ್ಯತೆಯಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!