ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ಬಳಿಕ ಸಿಕ್ಕಿತು ಕಣಿವೆ ರಾಜ್ಯದ ಈ ಹಳ್ಳಿಗಳಿಗೆ ವಿದ್ಯುತ್ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಕ್ಕೆ ಸ್ವಾತಂತ್ರ ಲಭಿಸಿದ ಬರೋಬ್ಬರಿ 75 ವರ್ಷಗಳ ಬಳಿಕ ಕಣಿವೆ ರಾಜ್ಯ ಕಾಶ್ಮೀರದ ಎರಡು ಹಳ್ಳಿಗಳಿಗೆ ವಿದ್ಯುತ್ ಬೆಳಕು ಕಾಲಿಟ್ಟಿದೆ.

ಕೇಂದ್ರ ಸರ್ಕಾರದ ಕೆಲವು ದಿಟ್ಟ ನಿರ್ಧಾರದ ಬಳಿಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಶ್ಮೀರ ಈ ಮೂಲಕ ಮತ್ತೊಂದು ಹೊಸ ಇತಿಹಾಸ ಬರೆದಿದೆ.

ಇಲ್ಲಿನ ಕೆರಾನ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಬರುವ ಕುಪ್ವಾರ ಜಿಲ್ಲೆಯ ಕೆರಾನ್ ಪ್ರದೇಶದ ಕುಂಡಿಯಾನ್ ಮತ್ತು ಪತ್ರೂ ಗ್ರಾಮಗಳಲ್ಲಿ ಸಮೃದ್ಧ್ ಸೀಮಾ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಎರಡು 250-ಕೆವಿ ಉಪ-ಕೇಂದ್ರಗಳನ್ನು ಕಾಶ್ಮೀರ ವಿಭಾಗೀಯ ಆಯುಕ್ತರು ಉದ್ಘಾಟಿಸಿದ್ದು, ಈ ಹಳ್ಳಿಯ ನಿವಾಸಿಗಳು ಇದೀಗ ವಿದ್ಯುತ್ ಬೆಳಕಿನ ಖುಷಿ ಅನುಭವಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!