Thursday, March 30, 2023

Latest Posts

VIRAL VIDEO| ಭಾರತ್‌ ಜೋಡೋ ಯಾತ್ರೆ ಬಳಿಕ ರಾಹುಲ್‌ ಇನ್ ಜಾಲಿ ಮೂಡ್:‌ ಗುಲ್ಮಾರ್ಗ್‌ನ ಹಿಮದಲ್ಲಿ ಸ್ಕೀಯಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಂಸತ್ತಿನ ಬಜೆಟ್ ಸಭೆಗಳ ಮೊದಲ ಹಂತವೂ ಪೂರ್ಣಗೊಂಡಿದೆ. ಇದರಿಂದ ರಾಹುಲ್ ಗಾಂಧಿ ಫುಲ್‌ ರಿಲಾಕ್ಸ್‌ ಮೂಡ್‌ಗೆ ತೆರಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನ ಹಿಮದ ಮೇಲೆ ಸ್ಕೀಯಿಂಗ್ ಆನಂದಿಸುತ್ತಿದ್ದಾರೆ. ಎರಡು ದಿನಗಳ ವೈಯಕ್ತಿಕ ಭೇಟಿಗಾಗಿ ಕಾಶ್ಮೀರಕ್ಕೆ ತೆರಳಿರುವ ರಾಹುಲ್, ಹಿಮದ ಮೇಲೆ ಸ್ಕೀಯಿಂಗ್ ಮಾಡುವ ಮೂಲಕ ಚಳಿಯ ವಾತಾವರಣವನ್ನು ಸವಿಯುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ‘ಭಾರತ್ ಜೋಡೋ ಯಾತ್ರೆ’ ಹೆಸರಿನ ಪಾದಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುದೀರ್ಘ ಪಯಣವನ್ನು ರಾಹುಲ್ ಗಾಂಧಿ ಯಶಸ್ವಿಯಾಗಿ ಮುಗಿಸಿದ್ದು ಗೊತ್ತೇ ಇದೆ. ಕಾಂಗ್ರೆಸ್‌ ಈಗಾಗಲೇ ಮತ್ತೊಂದು ಯಾತ್ರೆ ನಡೆಸಲು ಸಿದ್ಧವಾಗಿದೆ ಈ ನಡುವೆಯೂ ರಾಹುಲ್‌ ಬ್ರೇಕ್‌ ತೆಗೆದುಕೊಂಡು ನೇಚರ್‌ ಎಂಜಾಯ್‌ ಮಾಡುತ್ತಿದ್ದಾರೆ.

ಬಿಡುವಿಲ್ಲದ ವೇಳಾಪಟ್ಟಿಯ ನಂತರ ರಾಹುಲ್ ಹಿಮದ ಮೇಲೆ ಸ್ಕೀಯಿಂಗ್ ಮಾಡುತ್ತಾ ರಿಲ್ಯಾಕ್ಸ್ ಆಗುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!