ಕೆಲವೇ ದಿನದಲ್ಲಿ ಶೂಟಿಂಗ್ ಮುಗಿಸಿ ಸದ್ದು ಮಾಡಿದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರತಂಡ ಇದೀಗ ಸಿನಿಮಾ ಚಿತ್ರೀಕರಣ ಮುಗಿಸಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಮೂಲಕ ಕಂ ಬ್ಯಾಕ್ ಮಾಡಿರುವ ರಮ್ಯಾ, ತನ್ನದೇ ಪ್ರೊಡಕ್ಷನ್ ಹೌಸ್ ಮೂಲಕ ಸಿನಿಮಾ ನಿರ್ಮಿಸಿದ್ದಾರೆ.

ಅತ್ಯುತ್ತಮ ಸಿನಿಮಾಗಳ ಮೂಲಕ ಫ್ಯಾನ್ಸ್‌ನಲ್ಲಿ ಭರವಸೆ ಮೂಡಿಸಿರುವ ರಾಜ್.ಬಿ. ಶೆಟ್ಟಿ ಈ ಸಿನಿಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿದಿದ್ದು, ತಂಡ ಬೆಂಗಳೂರಿಗೆ ವಾಪಾಸಾಗಿದೆ. ಮೊದಲು ಸಿನಿಮಾಗೆ ರಮ್ಯಾ ನಾಯಕಿಯಾಗಬೇಕಿತ್ತು. ಆದರೆ ಇದೀಗ ರಮ್ಯಾ ಬದಲು ಸಿರಿ ರವಿಕುಮಾರ್ ನಾಯಕಿಯಾಗಿ ಚಿತ್ರೀಕರಣ ಮುಗಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!