ಅಕ್ಟೋಬರ್‌ನಲ್ಲಿ 6.77 ಶೇಕಡಾಗೆ ಇಳಿದ ಚಿಲ್ಲರೆ ಹಣದುಬ್ಬರ: ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ಟೋಬರ್‌ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು 6.77 ಶೇಕಡಾಗೆ ಇಳಿದಿದೆ. ಇದು ಹಿಂದಿನ ತಿಂಗಳು 7.41ಶೇಕಡಾದಷ್ಟಿತ್ತು ಎಂದು ಸರ್ಕಾರಿ ಅಂಕಿ ಅಂಶಗಳು ಬಿಡುಗಡೆ ಮಾಡಿದ ವರದಿ ಹೇಳಿದೆ.

ಮುಖ್ಯವಾಗಿ ಆಹಾರ ವಸ್ತುಗಳ ಬೆಲೆಗಳನ್ನು ಸರಾಗಗೊಳಿಸುವ ಕಾರಣದಿಂದಾಗಿ ಅಲ್ಪ ಪ್ರಮಾಣದಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಕುಸಿದಿದೆ. ಆದರೂ ಇದು ಆರ್‌ಬಿಐ ಅಂದಾಜಿಸಿದ ಮಟ್ಟಕ್ಕಿಂತ ಸತತವಾಗಿ 10ನೇ ತಿಂಗಳು ಹೆಚ್ಚಾಗಿಯೇ ಉಳಿದಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಈ ವರ್ಷದ ಜನವರಿಯಿಂದ ಆರ್‌ಬಿಐ ಅಂದಾಜಿಸಿದ 6 ಶೇಕಡಾ ಗುರಿಯ ಮೇಲೆ ಉಳಿದಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಆಹಾರ ವಸ್ತುಗಳ ಮೇಲಿನ ಹಣದುಬ್ಬರವು ಅಕ್ಟೋಬರ್‌ನಲ್ಲಿ 7.01 ಶೇಕಡಾ ಮತ್ತು ಸೆಪ್ಟೆಂಬರ್‌ನಲ್ಲಿ ಶೇಕಡಾ 8.6 ರಷ್ಟಿತ್ತು.

ಚಿಲ್ಲರೆ ಹಣದುಬ್ಬರವು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಶೇಕಡಾ 4.48 ರಷ್ಟಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!