ಗ್ಯಾನವಾಪಿ, ಈದ್ಗಾ ಮಸೀದಿ ಬಳಿಕ ʼತಿಲೇವಾಲಿʼ ಮಸೀದಿ ಮರಳಿ ಪಡೆಯಲು ಪಣತೊಟ್ಟ ಹಿಂದೂ ಸಂಘಟನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮತಾಂಧ ಮುಸ್ಲಿಂ ದೊರೆಗಳ ಆಕ್ರಮಣಕ್ಕೆ ತುತ್ತಾಗಿ ಮಸೀದಿಯಾಗಿ ಪರಿವರ್ತನೆಗೊಂಡ ಹಿಂದೂ ದೇವಾಲಯಗಳನ್ನು ಮರಳಿ ಪಡೆಯುವ ಅಭಿಯಾನ ದೇಶದಲ್ಲಿ ತೀವ್ರತೆ ಪಡೆಯುತ್ತಿದೆ. ದೇವಾಲಯವನ್ನೇ ಮಸೀದಿಯನ್ನಾಗಿ ಪರಿವರ್ತಿಸಿರುವ ಎಲ್ಲಾ ಕುರುಹುಗಳಿರುವ ವಾರಣಾಸಿಯ ಗ್ಯಾನವಾಪಿ ಮಸೀದಿ ಮತ್ತು ಮಥುರಾದ ಶ್ರೀ ಕೃಷ್ಣ ಜನನ್ಮಭೂಮಿಯ ಪಕ್ಕದಲ್ಲೇ ಇರುವ ಶಾಹಿ ಈದ್ಗಾ ಮಸೀದಿಗಳನ್ನು ಮರಳಿ ದೇವಾಲಯವನ್ನಾಗಿಸಲು ಕಾನೂನು ಹೋರಾಟಗಲೂ ನಡೆಯುತ್ತಿರುವುದರ ನಡುವೆಯೇ, ಇದೀಗ ಉತ್ತರ ಪ್ರದೇಶದ ಲಖನೌನಲ್ಲಿರುವ ಹಿಂದೆ ಹಿಂದೂ ದೇವಾಲಯವಾಗಿದ್ದ ʼತಿಲೇವಾಲಿ ಮಸೀದಿʼಯನ್ನು ಮರಳಿ ಪಡೆಯುವುದಾಗಿ ಹಿಂದೂಪರ ಸಂಘಟನೆಗಳು ಪಣತೊಟ್ಟಿವೆ.
ಗೋಮತಿ ನದಿಯ ದಡದಲ್ಲಿರುವ ತಿಲೇವಾಲಿ ಮಸೀದಿಯು ಉತ್ತರ ಪ್ರದೇಶ ರಾಜ್ಯದ ಅತಿದೊಡ್ಡ ಸುನ್ನಿ ಮಸೀದಿಯಾಗಿದೆ. ಈ ಮಸೀದಿಯು ಈದೀಗ ವಿವಾದದ ಕೇದ್ರಬಿಂದುವಾಗಿದೆ. ಇದು ವಾಸ್ತವವಾಗಿ  ‘ಲಕ್ಷ್ಮಣ ತಿಲಾ’ ದೇವಾಲಯವಾಗಿದೆ. ಮತಾಂಧ ಮೊಘಲ್ ದೊರೆಗಳು 16ನೇ ಶತಮಾನದಲ್ಲಿ ಇದನ್ನು ಮಸೀದಿಯಾಗಿ ಪರಿವರ್ತಿಸಿದ್ದಾರೆ. ಮಸೀದಿಯತ್ತ ಮೆರವಣಿಗೆಯಲ್ಲಿ ತೆರಳಿ ʼಹನುಮಾನ್‌ ಚಾಲೀಸಾʼ ಪಠಿಸುವುದಾಗಿ ಹಿಂದೂ ಮಹಾಸಭಾ ಕಾರ್ಯಕರ್ತರು ಪ್ರತಿಜ್ಞೆ ಮಾಡಿದ್ದರು.
ಈ ಘೋಷಣೆ ಹೊರಬೀಳುತ್ತಲೇ ಎಚ್ಚತ್ತುಕೊಂಡ ಪೊಲೀಸರು ಶನಿವಾರ ತಡರಾತ್ರಿ ಹಿಂದೂ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರಿಷಿ ತ್ರಿವೇದಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಭಾನುವಾರ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಯನ್ನು ನಿಷೇಧಿಸಿದರು. ಈ ಬೆನ್ನಲ್ಲೇ ನಾರಾರು ಹಿಂದೂ ಮಹಾಸಭಾ ಕಾರ್ಯಕರ್ತರು ಪೋಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ್ದು, ತಕ್ಷಣವೇ ತ್ರಿವೇದಿ ಅವರ ಬಿಡುಗಡೆಗೊಳಿಸುವಂತೆ ಹಾಗೂ ಮಸೀದಿಯತ್ತ ಮೆರವಣಿಗೆ ತೆರಳಲು ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.
ಲಕ್ಷ್ಮಣ ತಿಲ ಮುಕ್ತಿ ಸಂಕಲ್ಪ ಯಾತ್ರೆಯನ್ನು ನಿಷೇಧಿಸಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಮಸೀದಿಗೆ ತೆರಳುವ ರಸ್ತೆಗಳಲ್ಲಿ ನಿಯೋಜಿಸಲಾಗಿದೆ. ಮಸೀದಿಯತ್ತ ತೆರಳಲು ಯಾವುದೇ ಸಂಘಟನೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ, ಇದು ಕೇಸರಿ ಸಂಘಟನೆಗಳಿಂದ ಮಸೀದಿ ವಶಕ್ಕೆ ಪಡೆಯುವ ಯತ್ನ ಎಂದು ಕಿಡಿಕಾರಿರುವ ಮಸೀದಿಯ ಇಮಾಮ್ ಸೈಯದ್ ಫಜ್ಲುಲ್ ಮನ್ನಾನ್, ಮೆರವಣಿಗೆಯನ್ನು ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
ಲಖನೌ ಪಟ್ಟಣವನ್ನು ಪ್ರಭು ಶ್ರೀರಾಮನ ಸಹೋದರ ಲಕ್ಷ್ಮಣ ನಿರ್ಮಿಸಿದ್ದು, ನಗರದ ಹಿಂದಿನ ಹೆಸರು ‘ಲಖನ್‌ಪುರಿ’ ಎಂದಾಗಿತ್ತು ಎಂದು ಹಿಂದೂಪರ ಸಂಘಟನೆಗಳು ಹೇಳಿವೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ಲಕ್ನೋವನ್ನು ಲಖನೌಪುರ ಅಥವಾ ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡುವ ಎಂದು ಸುಳಿವು ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!