ʼಲಾಲ್‌ ಸಿಂಗ್‌ ಚಡ್ಡಾʼ ನೋಡುವಂತೆ ಕರೆ ನೀಡಿದ ಹೃತಿಕ್:‌ ನಿಮ್ಮ ವಿಕ್ರಮ್ ವೇದಾವೂ ಶೀಘ್ರದಲ್ಲೇ ಬರಲಿದೆ ಎಂದು ನೆನಪಿಸಿದ ಟ್ವಿಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಆ.11ರಂದು ಬಿಡುಗಡೆಯಾದ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದೆ. ಮತ್ತೊಂದೆಡೆ ಚಿತ್ರವನ್ನು ಭಹಿಷ್ಕರಿಸಬೇಕೆಂಬ ಅಭಿಯಾನವೂ ಜೋರಾಗಿದೆ. ವಿಶ್ಲೇಷಕರ ಪ್ರಕಾರ, #BoycottBollywood ಪ್ರವೃತ್ತಿಯು ಚಿತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ದೇಶದ ಹಲವೆಡೆ ಸಿನಿಮಾ ಪ್ರದರ್ಶನ ರದ್ದಾಗಿದೆ. ಇದರಿಂದ ಚಿತ್ರ ಬಾರೀ ಲಾಸ್‌ ಅನುಭವಿಸಿದೆ. ಐಎಂಡಿಬಿ ರ್ಯಾಂಕಿಂಗ್‌ ನಲ್ಲೂ ಚಿತ್ರಕ್ಕೆ ಕಡಿಮೆ ರೇಟಿಂಗ್‌ ಸಿಕ್ಕಿದೆ. ಈ ನಡುವೆ ಬಾಲಿವುಡ್‌ ನ ಕೆಲ ಸೆಲೆಬ್ರಿಟಿಗಳು ಅಮಿರ್‌ ಬೆಂಬಲಕ್ಕೆ ಧಾವಿಸಿದ್ದಾರೆ. ಇದೀಗ ಸ್ಟಾರ್ ನಟ ಹೃತಿಕ್ ರೋಷನ್ ಲಾಲ್ ಸಿಂಗ್ ಚಡ್ಡಾ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
“ಈಗಷ್ಟೇ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ವೀಕ್ಷಿಸಿದೆ. ಚಿತ್ರವು ಹೃದಯಸ್ಪರ್ಶಿಯಾಗಿದೆ. ಪ್ಲಸ್- ಮೈನಸ್‌ ಪಕ್ಕಕ್ಕಿಟ್ಟು ನೋಡಿದರೆ ಇದೊಂದು ಭವ್ಯ ಚಿತ್ರವಾಗಿದೆ. ಇಂತಹ ಚಿತ್ರರತ್ನವನ್ನು ಮಿಸ್ ಮಾಡಬೇಡಿ ಅಭಿಮಾನಿಗಳೇ.. ಈಗಲೇ ಹೋಗಿ ಚಿತ್ರವನ್ನು ನೋಡಿ. ಈ ಸಿನೆಮಾ ಸುಂದರವಾಗಿದೆ. ಬಹಳಷ್ಟು ಸುಂದರವಾಗಿದೆ” ಎಂದು ಹೃತಿಕ್‌ ಹೊಗಳಿದ್ದಾರೆ.

ಹೃತಿಕ್ ರೋಷನ್ ಟ್ವಿಟ್‌ ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಕಾಮೆಂಟ್‌ ಗಳು ಹರಿದು ಬರುತ್ತಿವೆ.

ಅಮೀರ್ ಖಾನ್ ಅವರನ್ನು ಬೆಂಬಲಿಸುವ ಮೂಲಕ ಹೃತಿಕ್ ನಿಮ್ಮ ವೃತ್ತಿಜೀವನವನ್ನು ಹಾಳುಮಾಡಿಕೊಳ್ಳಬೇಡಿ. ನಿಮಗೆ ದೊಡ್ಡ ಅಭಿಮಾನಿ ಬಳಗವಿದೆ. ಹಾಗಿದ್ದರೂ ನಿಮ್ಮ ಮುಂಬರುವ ಚಿತ್ರ ʼವಿಕ್ರಮ್ ವೇದಾʼ ಈ ನಿಮ್ಮ ಟ್ವಿಟ್‌ ಕಾರಣದಿಂದಲೇ ಫ್ಲಾಫ್‌ ಆಗಲಿದೆ ಎಂದು ಕಾಮೆಂಟ್‌ ಗಳು ಹರಿದುಬರುತ್ತಿವೆ.

ಈ ಟ್ವೀಟ್ ಹೃತಿಕ್‌ ರ ಸ್ವಂತ ಚಿತ್ರಕ್ಕೆ ದುಬಾರಿಯಾಗಿ ಪರಿಣಮಿಸಲಿದೆ ಎಂದು ಹಲವರು ಹೇಳಿದ್ದಾರೆ.
ತಮಿಳಿನ ಬ್ಲಾಕ್ಬಸ್ಟರ್ ಚಿತ್ರ ವಿಕ್ರಮ್ ವೇದದಲ್ಲಿ ಸೈಫ್ ಅಲಿ ಖಾನ್ ಮತ್ತು ಹೃತಿಕ್‌ ರೋಷನ್ ನಟಿಸಿದ್ದಾರೆ. ಬಹಿಷ್ಕಾರ ಚಳುವಳಿಯಿಂದ ಥಿಯೇಟರ್‌ಗಳಲ್ಲಿ ಈ ಚಿತ್ರಕ್ಕೂ ಹಾನಿಯಾಗಲಿದೆ ಎಂದು ಹೃತಿಕ್ ರೋಷನ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹಲವಾರು ಬಾಲಿವುಡ್‌ ಚಿತ್ರಗಳನ್ನು ಭಹಿಷ್ಕರಿಸುವಂತೆ ಕೂಗು ಬಲವಾಗುತ್ತಿದೆ. ಬಿಡುಗಡೆಗೆ ಆರು ತಿಂಗಳು ಬಾಕಿ ಇರುವಾಗಲೇ ಶಾರುಖ್‌ ಖಾನ್‌ ನಟನೆಯ ಪಠಾಣ್ ಚಿತ್ರಕ್ಕೆ ಬಹಿಷ್ಕಾರದ ಕೂಗು ಈಗಾಗಲೇ ಪ್ರಾರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!