ಇಡುಕ್ಕಿ ‘ಕೇರಳ ಸ್ಟೋರಿ’ ಬೆನ್ನಲ್ಲೇ ಎರ್ನಾಕುಲಂ ಚರ್ಚ್ ಆವರಣದಲ್ಲಿ ’ಕ್ರೈ ಆಫ್ ದಿ ಆಪ್ರೆಸ್ಡ್’ ಪ್ರದರ್ಶನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಇಡುಕ್ಕಿ ಸೈರೊ ಮಲಬಾರ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ವಿದ್ಯಾರ್ಥಿಗಳಿಗೆ ದಿ ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶಿಸಿದ ಸುದ್ದಿ ಚರ್ಚೆ ನಡೆಯುತ್ತಿರುವ ನಡುವೆಯೇ ಮಣಿಪುರದಲ್ಲಿ ನಡೆದ ಜನಾಂಗೀಯ ಗಲಭೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ’ಕ್ರೈ ಆಫ್ ದಿ ಆಪ್ರೆಸ್ಡ್’ನ್ನು ಎರ್ನಾಕುಲಂನ ಅಂಗಾಮಲೇ ಆರ್ಚ್ ಡಯಾಸಿಸ್, ಸಂಜೋಪುರಂ ಸೇಂಟ್ ಜೋಸೆಫ್ ಚರ್ಚ್ ಆವರಣದಲ್ಲಿ ಪ್ರದರ್ಶಿಸಿ ಗಮನಸೆಳೆದಿದೆ.

ಮೂಲಗಳ ಪ್ರಕಾರ ಸುಮಾರು 125 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಾ. ಜೇಮ್ಸ್ ಪನವೆಲಿಲ್, ಮಣಿಪುರದಲ್ಲಿ ನಡೆದಿರುವ ಘಟನೆಗಳು ಉತ್ಪ್ರೇಕ್ಷೆ ಅಲ್ಲ, ಸುಳ್ಳೂ ಅಲ್ಲ ಹೀಗಾಗಿ ಇಂಥ ಸಾಕ್ಷ್ಯಚಿತ್ರ ಪ್ರದರ್ಶಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಕೇರಳ ಸ್ಟೋರಿ ಚಲನಚಿತ್ರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಭಾವಿಸಿ ಇಡುಕ್ಕಿ ಡಯಾಸಿಸ್ ಪ್ರದರ್ಶಿಸಿರಬಹುದು. ಆದರೆ, ಅದರ ವಾಸ್ತವ ಅರಿತು ಪ್ರದರ್ಶನಕ್ಕೆ ಬೇರೆ ಚಿತ್ರ ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದೂ ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!