ಕಾಳಿ ಪೋಸ್ಟರ್‌ ಆಯ್ತು, ಇದೀಗ ʻಶಿವʼ ಧೂಮಪಾನದ ಬ್ಯಾನರ್ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಳಿ ಪೋಸ್ಟರ್‌ ಮೂಲಕ ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಸೃಷ್ಟಿಯಾದ ಬೆನ್ನಲ್ಲೇ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ʻಪರಮಶಿವʼ ಸಿಗರೇಟ್‌ಗೆ ಬೆಂಕಿ ಅಂಟಿಸುತ್ತಿರುವ ಬ್ಯಾನರ್‌ವೊಂದು ರಾಜಾಜಿಸುತ್ತಿದೆ. ಒಂದೆರೆಡು ಕಡೆ ಹಾಕಿದ ಈ ಪೋಸ್ಟರ್‌ ಪೊಲೀಸರ ಗಮನಕ್ಕೆ ಬಂದ ಕೂಡಲೇ, ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಅಂಟಿಸಿದವರನ್ನು ಠಾಣೆಗೆ ಕರೆಸಿ ವಿವಾದವಾಗುವ ಮೊದಲೇ ತೆಗೆಸಿದ್ದಾರೆ.

ಆದರೆ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ವಿವಾದದ ಕಿಚ್ಚು ಹೊತ್ತಿಕೊಂಡಿದೆ. ಬ್ಯಾನರ್ ವಿರೋಧಿಸಿ ಕೆಲ ಹಿಂದೂ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕನ್ಯಾಕುಮಾರಿ ಜಿಲ್ಲೆಯ ತಿಂಗಳ್ ನಗರದ ಆರೋಗ್ಯಪುರಂನಲ್ಲಿ ಈ ಘಟನೆ ನಡೆದಿದೆ.

ಎರಡು ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗೆ ಶುಭಾಷಯ ಕೋರುತ್ತಾ ಅವರ ಸ್ನೇಹಿತರು ಎರಡು ಕಡೆ ಇಂತಹ ಬ್ಯಾನರ್ ಹಾಕಿದ್ದಾರೆ. ಒಂದು ಕಡೆ ದಂಪತಿಯ ಪೋಟೋ ಹಾಕಿ ಮತ್ತೊಂದು ಬದಿ ಶಿವ ಸಿಗರೇಟ್‌ ಹಚ್ಚುತ್ತಿರುವ ದೃಶ್ಯ ಕಂಡುಬಂದಿದೆ. ಜೊತೆಗೆ ಈ ಬ್ಯಾನರ್‌ನಲ್ಲಿ ತನ್ನ ಕೂದಲನ್ನು ಹೆಂಡತಿ ಕೈಗೆ ಸಿಗದಂತೆ ತುಂಬಾ ಚಿಕ್ಕದಾಗಿ ಕತ್ತರಿಸುವಂತೆ ಸಲಹೆ ಕೂಡ ನೀಡಿದ್ದಾರೆ.

After Kali Poster, Banner Put Up In Kanyakumari Showing Lord Shiva 'Lighting  Cigarette'

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!