ಮಗಳು ಹುಟ್ಟಿದ ಬಳಿಕ ಬದುಕು ಬದಲಾಗಿದೆ, ನನಗೆ ಬೇರಾರೂ ಮುಖ್ಯ ಅಲ್ಲ: ಐಶ್ವರ್ಯಾ ರೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಶ್ವರ್ಯಾ ರೈ ಬಚ್ಚನ್ ಪ್ರಸ್ತುತ ತಾಯಿಯಾಗಿ ತಮ್ಮ ಕರ್ತವ್ಯವನ್ನು ಪೂರೈಸುತ್ತಿದ್ದಾರೆ. ಅವರು ಆರಾಧ್ಯಾ ಆರೈಕೆಯಲ್ಲಿ ನಿರತರಾಗಿದ್ದಾರೆ. ಆರಾಧ್ಯಾ ಹುಟ್ಟಿದ್ದು 2011. ಅಂದಿನಿಂದ ಆರಾಧ್ಯ ಸುದ್ದಿಯಲ್ಲಿದ್ದಾರೆ.

ಐಶ್ವರ್ಯಾ ಎಲ್ಲಿಗೆ ಹೋದರೂ ಆರಾಧ್ಯ ಅವರನ್ನು ಹಿಂಬಾಲಿಸುತ್ತಾರೆ. ಆರಾಧ್ಯ ಹುಟ್ಟಿದ ನಂತರ ತನ್ನ ಜೀವನವೇ ಬದಲಾಯಿತು ಎಂದು ಐಶ್ವರ್ಯಾ ರೈ ಹೇಳಿಕೊಂಡಿದ್ದಾರೆ. ಇದಲ್ಲದೆ, ಬೇರೆ ಯಾರೂ ಮುಖ್ಯರಲ್ಲ ಎಂದು ಹೇಳಿದ್ದಾರೆ.

ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಸುದ್ದಿ ಚರ್ಚೆಯಲ್ಲಿದೆ. ಅಭಿಷೇಕ್ ನಿಂದ ಐಶ್ವರ್ಯಾ ರೈ ದೂರವಾಗಿದ್ದಾರೆ ಎನ್ನಲಾಗಿದೆ. ಆದರೆ, ಇದು ಹಾಗಲ್ಲ ಎಂಬ ವರದಿಗಳಿವೆ. ಈ ನಡುವೆ ಐಶ್ವರ್ಯಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. “ನಾನು 18ನೇ ವಯಸ್ಸಿಗೆ ಸಾಕಷ್ಟು ಜವಾಬ್ದಾರಿಗಳ ಜೊತೆ ತೂರಾಡುತ್ತಿದ್ದೆ. ಬೆಳಿಗ್ಗೆ 5:30ಕ್ಕೆ ಎದ್ದೇಳುತ್ತಿದ್ದೆ. ನನಗೆ ಅವುಗಳು ಇನ್ನೂ ನೆನಪಿದೆ. ಆದರೆ, ಆರಾಧ್ಯಾ ಜನಿಸಿದ ನಂತರ ನನ್ನ ಆದ್ಯತೆಗಳು ಸಂಪೂರ್ಣವಾಗಿ ಬದಲಾಗಿವೆ. ಅವಳು ನನ್ನ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!