ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿ ಹೆಜ್ಜೆ ಹಾಕಿದ ಇಸ್ರೋ ಅಧ್ಯಕ್ಷ ಸೋಮನಾಥ್ ಅಂಡ್‌ ಟೀಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಲ್ಕು ವರ್ಷಗಳ ಹಿಂದೆ ಭಗ್ನಗೊಂಡಿದ್ದ ಕನಸನ್ನು ನನಸಾಗಿಸಲು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಜುಲೈ 14 ರಂದು ಚಂದ್ರಯಾನ-3 ಅನ್ನು ಉಡಾವಣೆ ಮಾಡಿತು. ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲಿಸಿ ಪ್ರಯೋಗ ಯಶಸ್ವಿಯಾಗುತ್ತಿದ್ದಂತೆ ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆದಿದೆ. ಅಂತೆಯೇ ಇಸ್ರೋದಲ್ಲಿ ವಿಜ್ಞಾನಿಗಳ ತಂಡ ಕೂಡ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಾಲ್ಕನೇ ದೇಶ ಎಂಬ ದಾಖಲೆಯನ್ನು ಭಾರತ ಬರೆದಿದೆ. ಅಷ್ಟೇ ಅಲ್ಲ, ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಮೊದಲ ದೇಶವೂ ಭಾರತವೇ. ಬುಧವಾರ ಸಂಜೆ ಸರಿಯಾಗಿ 5.47ಕ್ಕೆ ಆರಂಭವಾದ ಲ್ಯಾಂಡಿಂಗ್ ಪ್ರಕ್ರಿಯೆ 15 ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

ಚಂದ್ರಯಾನ 1 ಅನ್ನು 2008 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಸಾಫ್ಟ್ ಲ್ಯಾಂಡಿಂಗ್ಗಾಗಿ ಪ್ರಯತ್ನಗಳು ಪ್ರಾರಂಭವಾದವು. ಒಟ್ಟು 15 ವರ್ಷಗಳ ನಂತರ ಆ ಕನಸು ನನಸಾಯಿತು. ಲ್ಯಾಂಡರ್ ನಿಖರವಾಗಿ 6.03 ನಿಮಿಷಗಳಲ್ಲಿ ಚಂದ್ರನನ್ನು ಸ್ಪರ್ಶಿಸಿದ್ದು 140 ಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸಿದೆ. ಚಂದ್ರಯಾನ 3 ಯಶಸ್ವಿಯಾಗುತ್ತಿದ್ದಂತೆ ಇಸ್ರೋ ಅಧ್ಯಕ್ಷ ಸೋಮನಾಥ್, ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಖುಷಿಯಿಂದ ಕುಣಿದು ಕುಪ್ಪಳಿಸಿದರು. ವಿಜ್ಞಾನಿಗಳ ನೃತ್ಯದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!