Tuesday, October 3, 2023

Latest Posts

RELATIONSHIP | ನಿಮ್ಮ ಪಾರ್ಟ್‌ನರ್ ಚೀಟಿಂಗ್ ಮಾಡ್ತಿದ್ರೆ ಅವರಲ್ಲಿ ಈ ಬದಲಾವಣೆಗಳನ್ನು ಕಾಣ್ತೀರಿ..

ಇತ್ತೀಚೆಗೆ ಯಾಕೋ ನನ್ನ ಗಂಡ ಅಥವಾ ಹೆಂಡತಿ ವಿಚಿತ್ರವಾಗಿ ಬಿಹೇವ್ ಮಾಡ್ತಿದ್ದಾರೆ, ನನ್ನ ಮೇಲೆ ಚೀಟ್ ಮಾಡುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದ್ಯಾ? ಈ ಅಭ್ಯಾಸಗಳಲ್ಲಿ ಬದಲಾವಣೆಯಾಗಿದ್ಯಾ ಒಮ್ಮೆ ಪರೀಕ್ಷಿಸಿ..

ಮಾತಿನಲ್ಲಿ ಬದಲಾವಣೆ

ಮಾತನಾಡುವ ರೀತಿಯಲ್ಲಿ ಬದಲಾವಣೆ ಕಾಣ್ತೀರಿ, ಅವರು ನಿಮ್ಮನ್ನು ಪ್ರೀತಿಸ್ತಿದ್ದಾರೆ ಎಂದು ಅನಿಸುವ ಯಾವ ಮಾತುಗಳನ್ನು ಆಡೋದಿಲ್ಲ. ನಿಮ್ಮ ಮಾತಿಗೆ ಬೆಲೆ ಕೊಡೋದಿಲ್ಲ, ಈ ಬಗ್ಗೆ ನೀವು ಮಾತನಾಡಬೇಕು ಎಂದರೆ ಅವರು ರೆಡಿ ಇರೋದಿಲ್ಲ. ಮಾತನಾಡಲು ಬ್ಯುಸಿ ಇದ್ದೇನೆ, ಕೆಲಸ ಜಾಸ್ತಿ ಇದೆ ಹೀಗೆ ಸಾವಿರ ಕಾರಣ ಕೊಡ್ತಾರೆ, ಉತ್ತರ ಕೊಡೋ ಬದಲು ನಿಮ್ಮನ್ನೇ ಪ್ರಶ್ನೆ ಕೇಳಿ ಟಾಪಿಕ್ ಬದಲಾಯಿಸ್ತಾರೆ.

ಅಂದ-ಚಂದವೇ ಮುಖ್ಯ
ಈ ಹಿಂದೆ ಮುಖ ತೊಳೆಯದೇ ಹೋಗಿ ಹಾಲು ತರುತ್ತಿದ್ದವರು ಈಗ ಮುಖ ತೊಳೆದು ಫ್ರೆಶ್ ಆಗಿ ತಲೆ ಬಾಚ್ಕೊಂಡು ಹೊರ ಹೋಗ್ತಾರೆ. ಪಕ್ಕದ ಮನೆಗೆ ಕೊತ್ತಂಬರಿ ಕೇಳೋಕೆ ಹೋಗುವಾಗಲೂ ಕನ್ನಡಿ ನೋಡ್ತಾರೆ. ಆಫೀಸ್ ಅಥವಾ ಎಲ್ಲಿಗೇ ಹೋಗುವಾಗ ಕನ್ನಡಿ ಮುಂದೆ ಗಂಟೆಗಟ್ಟಲೆ ನಿಲ್ತಾರೆ, ಮಾಮೂಲಿಗಿಂತ ಚೆನ್ನಾಗಿ ಡ್ರೆಸ್ ಮಾಡೋದು, ಡ್ರೆಸ್ಸಿಂಗ್ ಸೆನ್ಸ್ ಬದಲಾವಣೆ ಆಗಿದ್ದು ತಿಳಿಯುತ್ತದೆ.

ಮನೆಯಲ್ಲಿ ಇರೋದಿಲ್ಲ
ಫ್ಯಾಮಿಲಿ ಫಂಕ್ಷನ್‌ಗೆ ಬರೋದಕ್ಕೆ ಇಷ್ಟಪಡೋದಿಲ್ಲ. ಮನೆಯಲ್ಲಿ ಕಡಿಮೆ ಇರ‍್ತಾರೆ. ಯಾವುದಾದರೂ ಹೊಸ ಹಾಬಿ ರೂಢಿ ಮಾಡ್ಕೊಂಡು ಮನೆಯಿಂದ ದೂರಾಗ್ತಾರೆ, ಮುಂಚೆಗಿಂತ ಹೆಚ್ಚು ಕೆಲಸ ಮಾಡ್ತಾರೆ. ಬೆಳಗ್ಗೆ ಹೋದ್ರೆ ರಾತ್ರಿ ಮನೆಗೆ ಬರ‍್ತಾರೆ.

ಆಟಿಟ್ಯೂಡ್ ಬದಲಾವಣೆ
ನಿಮ್ಮ ಜೊತೆ ಮಾತನಾಡೋದಕ್ಕೆ ಕಾನ್ಫಿಡೆನ್ಸ್ ಇರೋದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡೋದಿಲ್ಲ. ಹುಡುಕಿ ಹುಡುಕಿ ಜಗಳ ಮಾಡ್ತಾರೆ. ಬರೀ ನೆಗೆಟಿವ್ ಬಿಹೇವಿಯರ್, ನಿಮಗೆ ಅಫೇರ್ ಇದೆ ಅಥವಾ ಫೋನ್ ಕೊಡಿ ನೋಡ್ತೀನಿ ಎಂದೆಲ್ಲಾ ಹೇಳಿದರೆ ಕೋಪದಿಂದ ಏನೇನೋ ಮಾತನಾಡಿ ಎದ್ದು ಹೋಗ್ತಾರೆ.

ಸುಳ್ಳು ಹೇಳ್ತಾರೆ
ಸಿಕ್ಕಾಪಟ್ಟೆ ಸುಳ್ಳು, ಒಂದಕ್ಕೊಂದು ಜೋಡಿಸಿ ಸುಳ್ಳು ಹೇಳ್ತಾರೆ. ಎಲ್ಲಿದ್ದೆ? ಎಲ್ಲಿಗೆ ಹೋಗಿದ್ದೆ ಎಂದೆಲ್ಲಾ ಕೇಳಿದಾಗ ತಡವರಿಸ್ತಾರೆ. ಸೀಕ್ರೆಟ್ ಆಗಿ ಬಿಹೇವ್ ಮಾಡ್ತಾರೆ.

ಅವಾಯ್ಡ್ ಮಾಡ್ತಾರೆ
ನಿಮ್ಮನ್ನು ಅವಾಯ್ಡ್ ಮಾಡ್ತಾರೆ, ನಿಮ್ಮ ಜೊತೆ ಸುತ್ತಾಡೋಕೆ ಅಥವಾ ನಿಮ್ಮ ಜೊತೆ ಮನೆಲಿರೋದಕ್ಕೆ ಇಷ್ಟ ಇಲ್ಲ.

ನೀನೆ ಚೀಟ್ ಮಾಡಿದ್ದು
ಅವರೇ ಚೀಟಿಂಗ್ ಮಾಡುತ್ತಿದ್ದರೂ ಸೆಲ್ಫ್ ಡಿಫೆನ್ಸ್‌ಗಾಗಿ ನೀವೇ ಚೀಟಿಂಗ್ ಮಾಡುತ್ತಿದ್ದೀರಿ ಎಂದು ಹೇಳುತ್ತಾರೆ. ನಿನ್ನ ಮೇಲೆ ಅನುಮಾನ ಇದೆ ಎಂದು ನಾಟಕ ಮಾಡ್ತಾರೆ.

ಹೊಟ್ಟೆಕಿಚ್ಚಿಲ್ಲ
ಈ ಹಿಂದೆ ನೀವು ಚಂದದ ಬಟ್ಟೆ ಹಾಕಿ ಆಫೀಸ್‌ಗೆ ಹೊರಟರೆ ಆಫೀಸ್‌ಗೆ ಇಷ್ಟ್ಯಾಕೆ ರೆಡಿ ಆಗಬೇಕು ಅನ್ನುತ್ತಿದ್ದ ಪಾರ್ಟನರ್ ಈಗ ಮದುವೆ ಮನೆಗೆ ಹೊರಟಂತೆ ಹೊರಟರೂ ಕ್ಯಾರೆ ಅನ್ನೋದಿಲ್ಲ. ನಿಮ್ಮ ಪಾರ್ಟ್‌ನರ್‌ಗೆ ನಿಮ್ಮ ಸುತ್ತಮುತ್ತಲಿನ ಎಲ್ಲ ವಿಷಯವೂ ಬೋರಿಂಗ್ ಎನಿಸುತ್ತದೆ. ಬಾಯ್ಸ್ ಟ್ರಿಪ್ ಹೋದರೂ ಕ್ಯಾರೆ ಅನ್ನೋದಿಲ್ಲ.

ಸೆಕ್ಸ್ ಲೈಫ್‌ನಲ್ಲಿ ಬದಲಾವಣೆ
ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏಕಾಏಕಿ ಬದಲಾವಣೆ, ಸಣ್ಣ ಪುಟ್ಟ ರೊಮ್ಯಾನ್ಸ್ ಕೂಡ ಇಲ್ಲ. ಇದ್ದರೂ ಸೆಕ್ಸ್‌ನಲ್ಲಿ ಹಿಂದೆಂದೂ ಕಾಣದ ಬದಲಾವಣೆ ಕಾಣ್ತೀರ.

ದುಡ್ಡಿನ ವಿಷಯಕ್ಕೆ ಜಗಳ
ಅತಿಯಾಗಿ ಖರ್ಚು ಮಾಡೋದು, ದುಡ್ಡಿನ ವಿಷಯಕ್ಕೆ ಜಗಳ ಆಡೋದು ಸಾಮಾನ್ಯ ಆಗುತ್ತದೆ.

ಟೆಕ್ನಾಲಜಿ ಬದಲಾವಣೆ
ದಿನದ ಕೆಲ ಸಮಯ ನಿಮ್ಮ ಪಾರ್ಟ್‌ನರ್ ನಾಟ್ ರೀಚಬಲ್ ಆಗ್ತಾರೆ, ನಿಮಗೆ ತಿಳಿದಿದ್ ಎಲ್ಲ ಪಾಸ್‌ವರ್ಡ್ ಬದಲಾಗುತ್ತದೆ. ಯಾವಾಗ್ಲೂ ಫೋನ್ ಅಥವಾ ಮೆಸೇಜ್‌ನಲ್ಲಿ ಮುಳುಗುತ್ತಾರೆ, ಸ್ನಾನಕ್ಕೂ ಫೋನ್ ಬೇಕು.

ಈ ಎಲ್ಲ ಲಕ್ಷಣಗಳು ಎಲ್ಲರಿಗೂ ಕಾಣಬೇಕು ಎಂದೇನಿಲ್ಲ. ಕೆಲವು ವಿಷಯಗಳು ಮಾಮೂಲಿಯಾಗಿದ್ದರೂ ನಿಮಗೆ ಅನುಮಾನ ಬರಬಹುದು. ಪ್ರತಿಯೊಬ್ಬರ ವೈವಾಹಿಕ ಜೀವನವೂ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಹೊಂದಾಣಿಕೆ ಇರುತ್ತದೆ. ಯಾವುದೇ ಅನುಮಾನ ಬಂದರೂ ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!