ತಿರುಪತಿ ಬಳಿಕ ಮಥುರಾ ದೇವಾಲಯದ ಪ್ರಸಾದದ ಮೇಲೂ ಅನುಮಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಕೋಟ್ಯಾಂತರ ಭಕ್ತರಿಗೆ ಆಘಾತವನ್ನು ತಂದಿದೆ. ಹೀಗಾಗಿ ತಿರುಮಲದ ವೆಂಕಟೇಶ್ವರ ದೇವಾಲಯದಲ್ಲಿ ಮಹಾಶಾಂತಿ ಯಾಗ ಮಾಡಿ ಸಂಪ್ರೋಕ್ಷಣಾ ಕಾರ್ಯ ಮಾಡಲಾಗಿದೆ.

ಇತ್ತ ಉತ್ತರ ಭಾರತದಲ್ಲೂ ಕಲಬೆರಕೆಯ ಕೂಗು ಕೇಳಿ ಬಂದಿದೆ. ಉತ್ತರ ಪ್ರದೇಶ ಮಥುರಾದ ಕೃಷ್ಣ ದೇವಾಲಯದ ಪ್ರಸಾದದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರು ಈ ಬಗ್ಗೆ ಗಮನಹರಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಥುರಾ ದೇವಾಲಯದಲ್ಲಿ ಖೋವಾ ಪ್ರಸಾದ ನೀಡಲಾಗುತ್ತಿದೆ. ಆದರೆ ಅದು ಈಗ ಗುಣಮಟ್ಟದಿಂದ ಕೂಡಿಲ್ಲ ಸಂಸದೆ ಡಿಂಪಲ್ ಯಾದವ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವು ಮಥುರಾ ದೇವಾಲಯದ ಪ್ರಸಾದದ ಗುಣಮಟ್ಟದ ಕಡೆ ಗಮನ ಕೊಡಬೇಕು ಎಂದಿದ್ದಾರೆ.

ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಇಂತಹದೊಂದು ಆಕ್ಷೇಪ ವ್ಯಕ್ತಪಡಿಸಿರೋದು ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರು ಕೂಡ ಇದೇ ಮಾತನ್ನು ಹೇಳಿದ್ದಾರೆ. ನಾನು ಕೂಡ 2 ವರ್ಷದಿಂದ ಪ್ರಸಾದದ ಗುಣಮಟ್ಟದ ಬಗ್ಗೆ ಹೇಳುತ್ತಿದ್ದೇನೆ. ಮಥುರಾ ಬೃಂದಾವನ ದೇವಾಲಯದ ಪ್ರಸಾದದ ಬಗ್ಗೆ ತನಿಖೆಯಾಗಬೇಕು ಎಂದು ಬ್ರಿಜ್ ಭೂಷಣ್ ಸಿಂಗ್ ಅವರು ಒತ್ತಾಯಿಸಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!