ಹೊಸದಿಗಂತ ವರದಿ, ಯಾದಗಿರಿ:
ಸಿಡಿಲು ಬಡಿದು ನಾಲ್ವರು ಮೃತಪಟ್ಟಿರುವ ಘಟನೆ ತಾಲೂಕಿನ ಜೀನಕೇರಿ ತಾಂಡದಲ್ಲಿ ನಡೆದಿದೆ.
ಚೇನು (೨೨) ಕಿಶನ್ (೩೦) ಸುಮಿ ಬಾಯಿ (೩೦) ಮೃತ ದುರ್ದೈವಿಗಳು.
ತಾಂಡದ ಜಮೀನಿನಲ್ಲಿ ಈರುಳ್ಳಿ ನಾಟಿ ಮಾಡುತ್ತಿರುವ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ತಪ್ಪಿಸಿಕೊಳ್ಳಲು ಸಮೀಪದ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಪ್ಪಳಿಸಿದ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ಇವರ ಜೊತೆಗೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.