ಹೊಸದಿಗಂತ ಡಿಜಿಟಲ್ ಡೆಸ್ಕ್;
ಟಾಲಿವುಡ್ ನಟ ನಾಗಚೈತನ್ಯ, ಶೋಭಿತಾ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ ಮತ್ತು ಶೋಭಿತಾರವರ ವಿವಾಹಪೂರ್ವ ಶಾಸ್ತ್ರಗಳು ಜರುಗಿವೆ.
ಮದುವೆ ಕಾರ್ಯಕ್ರಮದ ಆರಂಭದ ಭಾಗವಾಗಿ ನಾಗಚೈತನ್ಯ ಹಾಗೂ ಶೋಭಿತಾ ಅರಿಶಿಣ ಕುಂಕುಮ ನೀರಿನಲ್ಲಿ ಪವಿತ್ರವಾದ ಮಂಗಳಸ್ನಾನ ಮಾಡಿದ್ದಾರೆ. ಜೊತೆಗೆ ಹಳದಿ ಶಾಸ್ತ್ರ ಕೂಡ ನೆರವೇರಿದೆ. ಶಾಸ್ತ್ರದ ವೇಳೆ, ಇಬ್ಬರೂ ಫುಲ್ ಖುಷಿಯಾಗಿದ್ದಾರೆ.
ಇದೇ ಡಿ.4ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ಜರುಗಲಿದೆ. ಈ ಮದುವೆಗೆ ತೆಲುಗು ಖ್ಯಾತ ನಟ, ನಟಿಯರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.