ಹೈಕಮಾಂಡ್ ಅಂಗಳಕ್ಕೆ ತಲುಪಿದ ರಾಜ್ಯ ಬಿಜೆಪಿ ಬಣ ಬಡಿದಾಟ: ಆರೋಪ-ಪ್ರತ್ಯಾರೋಪಗಳು ಜೋರು

ಹೊಸದಿಗಂತ ಡಿಜಿಟಲ್ ಡೆಸ್ಕ್;

ಶಾಸಕ ಬಸನಗೌಡ ಪಾಟೀಲ್​ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಬಹಿರಂಗ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಇದು ದೆಹಲಿಯ ಹೈಕಮಾಂಡ್​ ನಾಯಕರ ಗಮನಕ್ಕೂ ಬಂದಿದೆ.

ಇದೀಗ ಎಲ್ಲವನ್ನೂ ಅರಿತ ವರಿಷ್ಠರು ಬಣ ಕಿತ್ತಾಟಕ್ಕೆ ಬ್ರೇಕ್​ ಹಾಕುವುದಕ್ಕೆ ಟೈಂ ಫಿಕ್ಸ್ ಮಾಡೇ ಬಿಟ್ಟಿದ್ದಾರೆ. ಡಿಸೆಂಬರ್​​ನಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡಿ ಹೈಕಮಾಂಡ್​ ಗಮನಕ್ಕೆ ತರಲು ಪ್ಲ್ಯಾನ್​ ಮಾಡಲಾಗಿದೆ. ಇದರ ಮಧ್ಯೆಯೇ ಇದೀಗ ಶಾಸಕ ಯತ್ನಾಳ್ ಪ್ರತ್ಯೇಕ ಹೋರಾಟಕ್ಕೆ ಕೌಂಟರ್ ಆಗಿ ವಿಜಯೇಂದ್ರ ಆಪ್ತರು ಬೃಹತ್ ಸಮಾವೇಶಕ್ಕೆ ಸಜ್ಜಾಗಿದ್ದಾರೆ.

ಬೀದರ್​ನಿಂದ ವಕ್ಫ್​ ವಿರುದ್ಧ ಹೋರಾಟ ಆರಂಭಿಸಿರುವ ಬಸನಗೌಡ ಪಾಟೀಳ್ ಯತ್ನಾಳ್​, ಜಾಗೃತಿ ಅಭಿಯಾನ 5ನೇ ದಿನಕ್ಕೆ ಕಾಲಿಟ್ಟಿದೆ. ಇದಕ್ಕೆ ಕೌಂಟರ್ ಆಗಿಯೇ ಇದೀಗ ವಿಜಯೇಂದ್ರಗೆ ಎಂ.ಪಿ.ರೇಣುಕಾಚಾರ್ಯ ಟೀಂ ಬೆನ್ನಿಗೆ ನಿಂತಿದ್ದು, ಶೀಘ್ರದಲ್ಲೇ ವಿಜಯೇಂದ್ರ ಪರ ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಿದ್ದಾರೆ.

ನಾಳೆ ಹೈಕಮಾಂಡ್ ಅವರನ್ನು ಬಿವೈ ವಿಜಯೇಂದ್ರ ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಮೊನ್ನೆ ಅಷ್ಟೇ ಬಿವೈ ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!