February 28, 2026
Saturday, February 28, 2026
spot_img

ಸಾಧನೆಗೆ ವಯಸ್ಸು ಮುಖ್ಯವಲ್ಲ…57ರಲ್ಲೂ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಪರಿಮಳಾ ಜಗ್ಗೇಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನ ಜಗತ್ತಿನಲ್ಲಿ ಬಹುತೇಕರು ಬೇಗ ನಿವೃತ್ತಿ ಹೊಂದಿ, ಆರಾಮದಾಯಕ ಜೀವನ ನಡೆಸಲು ಬಯಸುತ್ತಾರೆ. ಆದರೆ, ಸಾಧನೆಗೆ ವಯಸ್ಸಿಲ್ಲ ಎಂಬುವುದನ್ನು ನಟ ಜಗ್ಗೇಶ್ ಅವರ ಪತ್ನಿ ಪರಿಮಳಾ ಅವರು ತೋರಿಸಿಕೊಟ್ಟಿದ್ದಾರೆ.

57 ವಯಸ್ಸಿನಲ್ಲಿ ಪರಿಮಳಾ ಜಗ್ಗೇಶ್ ಅವರು ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ ಎಂಬುದನ್ನು ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (SAI) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ ಆಯೋಜಿಸಲಾಗಿದ್ದ ‘3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್-2026’ರಲ್ಲಿ ಪರಿಮಳಾ ಜಗ್ಗೇಶ್ 10 ಮೀಟರ್ ಏರ್ ಪಿಸ್ತೂಲ್ ಚಾಂಪಿಯನ್‌ಶಿಪ್ ನಮಾಸ್ಟರ್ ವಿಮೆನ್ ಇಂಡಿವಿಜುವಲ್ ವಿಭಾಗದಲ್ಲಿ 342-4x ಸ್ಕೋರ್ ಮಾಡುವ ಮೂಲಕ ಬೆಳ್ಳಿ ಪದಕ ಗೆದ್ದರು.

ಗೋಲ್ಡನ್ ಏಸ್ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಕೋಚ್ ಸಂತೋಷ್ ಬಿ.ಎನ್. ಅವರಿಂದ ಪರಿಮಳಾ ಜಗ್ಗೇಶ್ ತರಬೇತಿ ಆರಂಭಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !