ಯುವಜನರ ದೇಶಸೇವೆಯ ಕನಸನ್ನು ಭಗ್ನಗೊಳಿಸಿದ ‘ಅಗ್ನಿಪಥ್’: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಭಾನುವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಮೂಲಕ ಸರಕಾರ ಯುವಕರ ದೇಶ ಸೇವೆ ಮಾಡುವ ಕನಸುಗಳನ್ನು ಭಗ್ನಗೊಳಿಸಿದೆ ಮತ್ತು ಅವರ ಮನಸ್ಸಿನಲ್ಲಿ ವಿವಿಧ ಆತಂಕಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿದೆ.
ಅಗ್ನಿವೀರರಾಗಿ ಭಾರತೀಯ ಸೇನೆಗೆ ಸೇರಿದ ಹಲವು ಯುವಕರು ತರಬೇತಿಯನ್ನು ಮಧ್ಯದಲ್ಲಿಯೇ ಬಿಡುತ್ತಿದ್ದಾರೆ ಎಂಬ ಮಾಧ್ಯಮ ವರದಿಯ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಈ ಹಿಂದೆ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬುದು ಯುವಕರ ಕನಸಾಗಿತ್ತು. ದೇಶ ಸೇವೆ ಮಾಡುವ ಯುವಕರ ಸಂಕಲ್ಪವನ್ನು ಗೌರವಿಸಿ ಅವರಿಗೆ ಉತ್ತಮ ಸೌಲಭ್ಯ ಹಾಗೂ ಉದ್ಯೋಗ ಭದ್ರತೆ ನೀಡಲಾಗಿತ್ತು’ ಆದ್ರೆ ‘ಅಗ್ನಿವೀರ್ ಯೋಜನೆಯ ಬುನಾದಿಯೇ ತಪ್ಪಾಗಿದೆ.ಯುವಜನರ ದೇಶಸೇವೆಯ ಕನಸುಗಳನ್ನು ಭಗ್ನಗೊಳಿಸಿದೆ ಮತ್ತು ನಾನಾ ಆತಂಕಗಳನ್ನು ಸೃಷ್ಟಿಸಿದೆ. ಈಗ ಫಲಿತಾಂಶ ಎಲ್ಲರ ಮುಂದಿದೆ ಎಂದು ಹೇಳಿದರು.

ಅಗ್ನಿಪಥ್ ಯೋಜನೆಯು ನಾಲ್ಕು ವರ್ಷಗಳ ಕಾಲ ಸಶಸ್ತ್ರ ಪಡೆಗಳಿಗೆ ಯುವಕರನ್ನು ನೇಮಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಅದರಲ್ಲಿ ಶೇ 25ರಷ್ಟು ಮಂದಿಯನ್ನು ಉಳಿಸಿಕೊಳ್ಳುವ ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!