ಏ.. ದೋಸತಿ… ಸ್ವಿಗ್ಗಿ Boy, ಜೊಮ್ಯಾಟೋ Boy ಅಂದ್ರು ಹಮ್ ನಹೀ ಚೋಡೆಂಗೇ…!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ದೃಶ್ಯ ನೋಡಿದರೆ ಶೋಲೆ ಚಿತ್ರದ ‘ಏ ದೋಸ್ತಿ… ಹಮ್ ನಹೀ ಚೋಡೆಂಗೇ…’ ಹಾಡು ನೆನಪಾಗದಿರದು!
ಆನ್‌ಲೈನ್ ಫುಡ್ ಡೆಲಿವರಿ ಸೇವೆ ನೀಡುವದೇಶದ ಪ್ರತಿಷ್ಠಿತ ಕಂಪನಿಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೋ ನಡುವೆ ಸದಾ ಪೈಪೋಟಿ ಇರುವುದು ಗೊತ್ತೇ ಇದೆ. ಆದರೆ ಇಲ್ಲಿ ನೋಡಿ ಇದೇ ಎರಡು ಕಂಪನಿಗಳ ಡೆಲಿವರಿ ಬಾಯ್‌ಗಳು ವೃತ್ತಿ ನಿರ್ವಹಿಸಲು ಪರಸ್ಪರ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ. ಸೈಕಲ್‌ನಲ್ಲಿ ಸಾಗುವ ಜೊಮ್ಯಾಟೋ ಡೆಲಿವರಿ ಬಾಯ್‌ಗೆ ಬೈಕ್‌ನಲ್ಲಿ ಸಾಗುವ ಸ್ವಿಗ್ಗಿ ಡೆಲಿವರಿ ಬಾಯ್ ಸೈಕಲ್ ಅನ್ನು ತನ್ನ ಕೈಯಲ್ಲಿ ಹಿಡಿದು ಬೈಕ್ ವೇಗದಲ್ಲಿ ಚಲಿಸಲು ಸಹಾಯ ಮಾಡುತ್ತಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾವನೆ ಉಕ್ಕಿಸುವ ಈ ದೃಶ್ಯಾವಳಿಗಳಿಗೆ ಭರಪೂರ ಮೆಚ್ಚುಗೆಗಳ ಪ್ರವಾಹವೇ ಹರಿದುಬರುತ್ತಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!