ಅಹಮದಾಬಾದ್ ಶಾಲೆಗಳಿಗೂ ಬಂತು ಬಾಂಬ್ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ಮುನ್ನಾದಿನ ಗುಜರಾತ್‌ ಅಹಮದಾಬಾದ್ ನಲ್ಲಿರುವ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮಾಡಲಾಗಿದೆ.

ಅಹಮದಾಬಾದ್ ನ ಭೋಪಾಲ್ ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಆನಂದ್ ನಿಕೇತನ್ ವಸ್ತ್ರಾಪುರದಲ್ಲಿರುವ ಏಷ್ಯಾ ಇಂಗ್ಲಿಷ್ ಸ್ಕೂಲ್, ಘಟ್ಲೋಡಿಯಾದಲ್ಲಿರುವ ಕ್ಯಾಲೋರೆಕ್ಸ್ ಶಾಲೆ, ಅಮೃತ ವಿದ್ಯಾಲಯ ಮತ್ತು ಚಂದಖೇಡದಲ್ಲಿರುವ ನ್ಯೂ ನೋಬಲ್ ಸ್ಕೂಲ್ ಮತ್ತು ಒಎನ್‌ಜಿಸಿ ಕೇಂದ್ರೀಯ ವಿದ್ಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ‌.

– Advertisement 3
ಇಮೇಲ್ ಸ್ವೀಕರಿಸಿದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿವೆ. ಮಾಹಿತಿ ಪಡೆದ ಪೊಲೀಸ್ ತಂಡಗಳು ಬಾಂಬ್ ಸ್ಕ್ವಾಡ್‌ಗಳೊಂದಿಗೆ ಶಾಲೆಗಳಿಗೆ ಬಂದು ಪರಿಶೀಲನೆ ನಡೆಸಿದವು. ಪ್ರಾಥಮಿಕ ಮಾಹಿತಿ ಪ್ರಕಾರ, ಬೆದರಿಕೆ ಇ-ಮೇಲ್‌ಗಳು ಭಾರತದ ಹೊರಗಿನ ಡೊಮೇನ್‌ನಿಂದ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ವಾರ ದೆಹಲಿ-ಎನ್‌ಸಿಆರ್‌ನಾದ್ಯಂತ 150 ಕ್ಕೂ ಹೆಚ್ಚು ಶಾಲೆಗಳು ಮತ್ತು ಲಕ್ನೋದ ಒಂದು ಶಾಲೆಗಳಿಗೆ ರಷ್ಯಾದಿಂದ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!