ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಿಸಿದ ಪಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ತಮ್ಮ ಆಟಗಾರನ್ನು ಮಾತ್ರ ಆಶಾರಾಮಿಯಾಗಿ ನೋಡುತ್ತಿದ್ದಾರೆ.

ಇಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. 1 ಕಿಲೋ ಗೋಧಿ ಹಿಟ್ಟಿಗೆ 800 ಪಾಕಿಸ್ತಾನಿ ರೂ.ಗಳು, 1 ರೊಟ್ಟಿಯ ಬೆಲೆ 25 ಪಾಕಿಸ್ತಾನಿ ರೂ. ತಲುಪಿದೆ. ಪೆಟ್ರೋಲ್‌ ದರವಂತು ಹೇಳತೀರದಾಗಿದೆ. ಹೀಗಿದ್ದರೂ ಕ್ರಿಕೆಟ್‌ ಆಟಗಾರರಿಗೆ (Pak Cricketers) ಬಂಪರ್‌ ಬಹುಮಾನ ಘೋಷಿಸಿದೆ.

ಜೂನ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗೆದ್ದರೆ ತಂಡದ ಪ್ರತಿ ಆಟಗಾರನಿಗೂ 1 ಲಕ್ಷ US ಡಾಲರ್‌ (ಭಾರತದ ರೂಪಾಯಿ 83.44 ಲಕ್ಷ ರೂ.) ಬಹುಮಾನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಘೋಷಣೆ ಮಾಡಿದೆ.

ಪಾಕ್‌ ತಂಡವು ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಹೊರಡುವ ಮುನ್ನ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಆಟಗಾರರೊಂದಿಗೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಬಹುಮಾನದ ಮೊತ್ತವನ್ನು ಘೋಷಣೆ ಮಾಡಿದರಲ್ಲದೇ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯುವ ಘನತೆಗೆ ಹೋಲಿಸಿದ್ರೆ, ಈ ಹಣ ಏನೇನು ಅಲ್ಲ. ಆದ್ದರಿಂದ ಟಿ20 ವಿಶ್ವಕಪ್‌ ಗೆದ್ದರೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 100,000 ಯುಎಸ್‌ ಡಾಲರ್‌ ಬಹುಮಾನ ನೀಡುವುದಾಗಿ ಘೋಷಿಸಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!