HEALTH ‘ಈ ಚಳಿಯಲ್ಲಿ ನೀರು ಯಾರು ಕುಡಿತಾರೆ?’ ಕುಡಿಯದಿದ್ರೆ ಸಮಸ್ಯೆ ತಪ್ಪಿದ್ದಲ್ಲ..

ನೆಲಕ್ಕೆ ಕಾಲು ಇಡೋಕೆ ಕಷ್ಟವಾಗಿರೋ ಈ ವೆದರ್‌ನಲ್ಲಿ ನೀರು ಕುಡಿಯೋಕೆ ಎದ್ದು ಹೋಗೋದು ಯಾರು? ಒಂದು ಪಕ್ಷ ಎದ್ದು ಹೋದರೂ ಆ ತಣ್ಣಗಿನ ನೀರನ್ನು ಕುಡಿಯೋದು ಹೇಗೆ? ಬಿಸಿ ನೀರನ್ನಾದರೂ ಕಾಯಿಸೋಕೆ ಎದ್ದಾಳಲೇ ಬೇಕಲ್ಲಾ?

ಇಷ್ಟಲ್ಲದೆ ನೀರು ಕುಡಿದಷ್ಟು ವಾಶ್‌ರೂಂಗೆ ಹೋಗಬೇಕು, ಹೋಗಿ ಬಂದರೆ ಕೈ ಕಾಲು ಥಂಡಿ.ಬೆಡ್‌ಶೀಟ್ ಹೊದ್ದು ಬೆಚ್ಚಗೆ ಮಲಗಿದವರ ಕಷ್ಟ ಇದೆಲ್ಲಾ.. ಯಾವುದೇ ಕಾಲ ಇರಲಿ ದೇಹಕ್ಕೆ ನೀರು ಬೇಕೇ ಬೇಕು.

ನೀರು ಕುಡಿಯೋದಕ್ಕೂ ಐಡಿಯಾ ಮಾಡುವ ಕಾಲ ಬಂದಿದೆ ನೋಡಿ..

  • ದಿನಕ್ಕೆರಡು ಬಾರಿ ಟೀ ಕುಡಿಯೋದಿಲ್ವಾ? ಒಮ್ಮೆ ಬಿಸಿನೀರಿಗೆ ಜೇನುತುಪ್ಪ, ನಿಂಬೆಹಣ್ಣು ಹಾಕಿಕೊಂಡು ಟೀ ಎಂದು ಕುಡಿದುಬಿಡಿ, ದೇಹ ಹೈಡ್ರೇಟ್ ಆಗಿರಲಿ.
  • ರೊಟೀನ್ ಮಾಡಿಕೊಳ್ಳಿ, ದಿನಕ್ಕೆ ಇಷ್ಟು ಲೀಟರ್, ಬೆಳಗ್ಗೆ ಎದ್ದಾಗ ಒಂದು ಲೋಟ ಬಿಸಿನೀರು, ರಾತ್ರಿ ಮಲಗುವಾಗ ಒಂದು ಲೋಟ ಬಿಸಿನೀರು ಹೀಗೆ ರೊಟೀನ್ ಮಾಡಿಕೊಳ್ಳಿ.
  • ತಣ್ಣಗಿನ ನೀರು ಇಷ್ಟ ಇಲ್ವಾ? ಪರವಾಗಿಲ್ಲ ಬೆಚ್ಚಗಿನ ನ ಈರು ಕುಡಿಯಿರಿ. ಒಟ್ಟಾರೆ ನೀಡು ಕುಡಿಯಬೇಕಷ್ಟೆ.
  • ನೀರು ಕುಡಿಯೋದು ಕಷ್ಟವಾದ್ರೆ ಹಣ್ಣು, ತರಕಾರಿ ಸೇವನೆ ಹೆಚ್ಚು ಮಾಡಿ. ಇವು ನಿಮ್ಮ ದೇಹಕ್ಕೆ ನೀರು ನೀಡುತ್ತವೆ.
  • ಆದಷ್ಟು ಸೋಡಾ ಹಾಗೂ ಮದ್ಯಪಾನದಿಂದ ದೂರ ಇರಿ.
  • ಇನ್ನು ಪದೇ ಪದೆ ಕಾಫಿ ಟೀ ಕುಡಿಯಬೇಡಿ. ಇದು ನೀರಿನಂಶ ಕಡಿಮೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!