ದಿನಭವಿಷ್ಯ| ಈ ದಿನ ವೃತ್ತಿಯಲ್ಲಿ ಬಿಡುವಿಲ್ಲದ ಕೆಲಸ, ವಾಗ್ವಾದ ನಡೆಯಬಹುದು…

ದಿನಭವಿಷ್ಯ

ಮೇಷ
ದೈಹಿಕ ಅನಾರೋಗ್ಯ ಉಂಟಾದೀತು. ಆದರೆ ಗಂಭೀರವೇನೂ ಅಲ್ಲ. ಮನಸ್ಸಿಗೆ ಕಿರಿಕಿರಿ ಮಾಡುವ ವ್ಯಕ್ತಿಗಳು ನಿಮ್ಮ ಸುತ್ತಲಿದ್ದಾರೆ. ಅವರಿಂದ ದೂರವಿರಿ.

ವೃಷಭ
ವೃತ್ತಿಯಲ್ಲಿ ಬಿಡುವಿಲ್ಲದ ಕೆಲಸ. ಮಾಡಿದ ಕೆಲಸವೂ ನಿಮಗೆ ತೃಪ್ತಿ ತರುವುದಿಲ್ಲ. ಮನೆಯಲ್ಲಿ ಸಣ್ಣಪುಟ್ಟ ವಿರಸ, ವಾಗ್ವಾದ ನಡೆಯಬಹುದು.

ಮಿಥುನ
ಪ್ರಮುಖ ವಿಷಯಗಳಲ್ಲಿ ನಿಮ್ಮನ್ನು ಗೊಂದಲ ಕಾಡುವುದು. ಸ್ಪಷ್ಟ ನಿಲುವು ತಳೆದು ಮುಂದುವರಿಯಿರಿ. ಇತರರ ಜತೆ ಸಮಾಲೋಚನೆ ನಡೆಸಿ.

ಕಟಕ
ಭಾವನೆಗೆ ದಾಸರಾಗಿ ವಿವೇಕ ಕಳಕೊಳ್ಳದಿರಿ. ಆತ್ಮೀಯ ಸಂಬಂಧಕ್ಕೆ ಧಕ್ಕೆಯಾದೀತು. ಭಾವುಕ ವಿಷಯಗಳಲ್ಲಿ ಯೋಚಿಸಿ ನಿರ್ಧಾರಕ್ಕೆ ಬರುವುದೊಳಿತು.

ಸಿಂಹ
ಮಿಶ್ರ ಫಲದ ದಿನ. ವೃತ್ತಿಯಲ್ಲಿ ಒತ್ತಡ. ಕೆಲವು ಹಿನ್ನಡೆ ಸಂಭವಿಸಬಹುದು. ಖಾಸಗಿ ಬದುಕಲ್ಲಿ ಪೂರಕ ಬೆಳವಣಿಗೆ. ಧನಲಾಭ.

ಕನ್ಯಾ
ಕಾರ್ಯಸಿದ್ಧಿ. ಅಡ್ಡಿಗಳು ನಿವಾರಣೆ. ಹಾಗಾಗಿ ಮನಸ್ಸು ನಿರಾಳ. ಕೌಟುಂಬಿಕ ಉದ್ವಿಗ್ನತೆ ಶಮನ. ಬಂಧುಗಳಿಂದ ಅನಿರೀಕ್ಷಿತ ನೆರವು, ಸಹಕಾg

ತುಲಾ
ಸರಿಯಾದ ವೇಳಾಪಟ್ಟಿ ಹಾಕಿಕೊಂಡು ಕೆಲಸಕ್ಕೆ ಮುಂದಾಗಿ. ಆಗ ಎಲ್ಲವೂ ಸುಸೂತ್ರವಾಗಿ ಸಾಗುವುದು. ಖರೀದಿಗೆ ಮುಂದಾಗುವಾಗ ಖರ್ಚು ಮಿತಗೊಳಿಸಿ. .

ವೃಶ್ಚಿಕ
ಕಾಲವ್ಯಯ ಮಾಡದಿರಿ. ಪ್ರಮುಖ ಕಾರ್ಯ ಮುಂದಕ್ಕೆ ಹಾಕದಿರಿ. ಮಾಡಬೇಕಾದುದನ್ನು  ಕೂಡಲೇ ಮಾಡಿ ಮುಗಿಸಿ. ಎಲ್ಲವೂ ಸುಗಮವಾಗುವುದು.

ಧನು
ಎಲ್ಲಾ ವಿಷಯಗಳಲ್ಲೂ ಇಂದು ನಿಮಗೆ ಶುಭದಿನ. ವೃತ್ತಿಯಲ್ಲಾ ಗಲಿ, ಕೌಟುಂಬಿಕವಾಗಿ ಆಗಲಿ ನೀವು ಬಯಸಿದ ಕಾರ್ಯ ನೆರವೇರುವುದು.

ಮಕರ
ನಿಮ್ಮ ಕಾರ್ಯವು ಎಲ್ಲರಿಂದ ಗುರುತಿಸ ಲ್ಪಡುತ್ತದೆ. ಮೇಲಕಾರಿಗಳಿಂದ ಶ್ಲಾಘನೆ. ಮನದಲ್ಲಿ ಕಾ

ಕುಂಭ
ಎಲ್ಲರ ಜತೆ ಉತ್ತಮ ಸಂವಹನ ಸಾಸುವಿರಿ. ಇದರಿಂದ ನಿಮ್ಮ ಕಾರ್ಯಗಳು ಸುಗಮ. ವಿಘ್ನಗಳು ನಿವಾರಣೆ. ಉದ್ಯಮದಲ್ಲಿ ಸುಸೂತ್ರ ವ್ಯವಹಾರ. ಡುತ್ತಿದ್ದ ಸಂಶಯವೊಂದು ನಿವಾರಣೆ ಕಾಣುವುದು.

ಮೀನ
ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಲು ಹಿಂಜರಿಕೆ ಬೇಡ. ಅದರಿಂದ ಭಿನ್ನಮತ ಶಮನವಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!