ಮೈಕ್ರೋಸಾಫ್ಟ್‌ ನೊಂದಿಗೆ ಒಪ್ಪಂದ ಮಾಡಿಕೊಂಡ ಏರ್‌ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಹೆಮ್ಮೆಯ ವಿಮಾನಯಾನ ಸಂಸ್ಥೆಯಾದ ಏರ್‌ ಇಂಡಿಯಾವು ಸಾಫ್ಟ್‌ ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದೆ. ಉತ್ಪಾದಕತೆ ಮತ್ತು ವೆಚ್ಚ ಉಳಿತಾಯವನ್ನು ಸುಧಾರಿಸಲು ಮೈಕ್ರೋಸಾಫ್ಟ್‌ನೊಂದಿಗೆ ಸಹಯೋಗ ಹೊಂದಿರುವುದಾಗಿ ಖಾಸಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸೋಮವಾರ ಹೇಳಿದೆ.

ಸಹಯೋಗದ ಭಾಗವಾಗಿ ಮೈಕ್ರೋಸಾಫ್ಟ್ 365 ಉಪಕರಣಗಳು ಮತ್ತು ಅದರ ಭದ್ರತಾ ಪರಿಹಾರಗಳನ್ನು ಅಳವಡಿಸಿಕೊಳ್ಳುಲಾಗುತ್ತಿದ್ದು ಇದು ಸಂಸ್ಥೆಯಾದ್ಯಂತ ಏರ್ ಇಂಡಿಯಾ ಉದ್ಯೋಗಿಗಳಿಗೆ ಉತ್ಪಾದಕತೆ ಮತ್ತು ಸುರಕ್ಷತೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

ಮೈಕ್ರೋಸಾಫ್ಟ್ ಟೆಕ್ನಾಲಜೀಸ್ ಎಂಟರ್‌ಪ್ರೈಸ್- ವೈಡ್‌ ತಂತ್ರಜ್ಞಾನದ ಅಳವಡಿಕೆಯು ಏರ್‌ಲೈನ್‌ನ ಪ್ರತಿಯೊಬ್ಬ ಉದ್ಯೋಗಿಯು ವಿಶ್ವದ ಎಲ್ಲಿಂದಲಾದರೂ ಇತರ ಸಿಬ್ಬಂದಿಗಳೊಂದಿಗೆ ತ್ವರಿತವಾಗಿ ಮತ್ತು ಸುರಕ್ಷಿತ ರೀತಿಯಲ್ಲಿ ಸಂಪರ್ಕಿಸಲು, ಸಂವಹನ ಮಾಡಲು ಮತ್ತು ಸಹಯೋಗಿಸಲು ಅನುವು ಮಾಡಿಕೊಡುತ್ತದೆ ಎಂದು ಅದು ಹೇಳಿದೆ.

“ಏರ್‌ ಇಂಡಿಯಾದ ತಂತ್ರಜ್ಞಾನ ವ್ಯವಸ್ಥೆಯಲ್ಲಿ ನಾವು ಆಮೂಲಾಗ್ರ ಬದಲಾವಣೆ ತರಲು ಚಿಂತಿಸುತ್ತಿದ್ದೇವೆ. ಮೈಕ್ರೋಸಾಫ್ಟ್‌ ನೊಂದಿಗಿನ ಸಹಯೋಗವು ವಿಶ್ವ ದರ್ಜೆಯ ಉತ್ಪಾದಕತೆ, ಸಹಯೋಗ ಮತ್ತು ಭದ್ರತೆಯನ್ನು ಹೊಂದಲು ಅನುವು ಮಾಡಿಕೊಟ್ಟಿದೆ. ಇದು ನಮ್ಮ ಉದ್ಯೋಗಿಗಳಿಗೆ ಹೊಸ ಅನುಭವ ನೀಡಲಿದೆ” ಎಂದು ಏರ್ ಇಂಡಿಯಾದ ಮುಖ್ಯ ಡಿಜಿಟಲ್ ಮತ್ತು ತಂತ್ರಜ್ಞಾನ ಅಧಿಕಾರಿ ಸತ್ಯ ರಾಮಸ್ವಾಮಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!