ಉಕ್ರೇನ್‌ ನಲ್ಲಿರುವ ಭಾರತೀಯರ ರಕ್ಷಣೆಗೆ 3 ಏರ್‌ ಇಂಡಿಯಾ ವಿಮಾನಗಳ ವ್ಯವಸ್ಥೆ: ಬುಕಿಂಗ್‌ ಓಪನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧದ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್‌ ನಲ್ಲಿರುವ ಭಾರತೀಯರ ರಕ್ಷಣೆಗೆ ಮೂರು ವಿಮಾನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಫೆಬ್ರವರಿ ತಿಂಗಳಲ್ಲಿಯೇ ಮೂರು ಏರ್‌ ಇಂಡಿಯಾ ವಿಮಾನಗಳು ಉಕ್ರೇನ್‌ ಹಾಗೂ ಭಾರತದ ನಡುವೆ ಸಂಚರಿಸಯತ್ತವೆ ಎಂದು ಏರ್‌ ಇಂಡಿಯಾ ತಿಳಿಸಿದೆ.
ಫೆ.22, 24 ಹಾಗೂ 26ರಂದು ಭಾರತ ಮತ್ತು ಉಕ್ರೇನ್‌ ನಡುವೆ ವಿಮಾನ ಹಾರಾಟ ನಡೆಯಲಿದೆ. ಬೋರಿಸ್ಟಿಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳು ಟೇಕ್‌ ಆಫ್‌ ಆಗಲಿದೆ. ಏರ್‌ ಇಂಡಿಯಾ ಕಚೇರಿ, ವೆಬ್‌ ಸೈಟ್‌, ಕಾಲ್‌ ಸೆಂಟರ್‌ ಗಳ ಮೂಲಕ ಬುಕಿಂಗ್‌ ಮಾಡಬಹುದಾಗಿದೆ.
ಉಕ್ರೇನ್‌ ನಲ್ಲಿ ಪರಿಸ್ಥಿತಿ ಬಿಗಿಡಾಯಿಸಿಕೊಂಡಿದ್ದು, ಗಡಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸುವ ಮೂಲಕ ಆತಂಕ ಹೆಚ್ಚಿಸಿದೆ. ಉತ್ತರ ಬೆಲಾರಸ್‌ ಮತ್ತು ದಕ್ಷಿಣ ಕ್ರೈಮಿಯಾದ ಪೂರ್ವದಲ್ಲಿನ ಡೊನ್ಬಾಸ್‌ ಪ್ರದೇಶದ ಗಡಿಯಲ್ಲಿ ರಷ್ಯಾ ಸುಮಾರು 1.5 ಲಕ್ಷ ಸೈನಿಕರನ್ನು ನಿಯೋಜಿಸಿದೆ. ಕೈವ್‌ನಲ್ಲಿರುವ ಭಾರತೀಯ ಕಚೇರಿಯು ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!