ಹಿರಿಯ ವಿದ್ವಾಂಸ, ನಿವೃತ್ತ ಎಇಒ ಎ.ನರಸಿಂಹ ಭಟ್ ಇನ್ನಿಲ್ಲ

ಹೊಸದಿಗಂತ ವರದಿ, ಕಾಸರಗೋಡು:

ಹಿರಿಯ ವಿದ್ವಾಂಸ, ಶಿಕ್ಷಣ ತಜ್ಞ, ಭಾಷಾಂತರಕಾರ, ನಿವೃತ್ತ ಎಇಒ, ಎ.ನರಸಿಂಹ ಭಟ್ (92) ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂಲತಃ ಅಡ್ಯನಡ್ಕ ನಿವಾಸಿಯಾಗಿದ್ದ ಕಾಸರಗೋಡು ಕೋಟೆಕಣಿ ನಿವಾಸಿಯಾಗಿದ್ದ ನರಸಿಂಹ ಭಟ್‌ ಅವರು, ಮುಂದೆ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.
ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಖ್ಯಾತ ಸಾಹಿತಿ ಹಾಗೂ ಶ್ರೇಷ್ಠ ಬರಹಗಾರರಾಗಿದ್ದ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇವರು ಕಾಸರಗೋಡು ಹವ್ಯಕ ಭಾರತೀ ಸೇವಾ ಟ್ರಸ್ಟ್ ನ ಹಿರಿಯ ಸದಸ್ಯರೂ ಆಗಿದ್ದರು.
ಮೃತರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!