ಐತಿಹಾಸಿಕ ಬೀದರ್‌ ಕೋಟೆಯ ಮೇಲೆ ಏರ್‌ ಶೋ

ಹೊಸದಿಗಂತ ವರದಿ ಬೀದರ್:
ಬೀದರಿನ ಬಹಮನಿ ಕಾಲದ  ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೀದರ್‌ ಕೋಟೆ ಮೇಲೆ ಸೆಪ್ಟೆಂಬರ್ 2 ಹಾಗೂ 3 ರಂದು ಸಂಜೆ 4.30ಕ್ಕೆ ಏರ್ ಶೋ ಆಯೋಜಿಸಲಾಗಿದೆ. ಏರ್ ಶೋ ಪ್ರದರ್ಶನ ನೋಡಲು ಬೀದರ್ ಜಿಲ್ಲೆಯ ಶಾಲೆ ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಆಗಸದಲ್ಲಿ ಲೋಹದ ಹಕ್ಕಿಗಳ ನಾನಾ ರೀತಿಯ ಕಸರತ್ತುಗಳನ್ನು ಕಣ್ತುಂಬಿಸಿಕೊಳ್ಳುವ ಅವಕಾಶವನ್ನು ಭಾರತೀಯ ವಾಯುಪಡೆ ನೀಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಈ ಏರ್ ಶೋ ವನ್ನು ಆಯೋಜಿಸಲಾಗಿದೆ.

ಸೆ. 2 ರಂದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸೆ.3 ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ಸೆಪ್ಟೆಂಬರ್‌ 2 ರಂದು ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಈ ಏರ್‌ ಶೋ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಅಂದು ಸಂಜೆ 4.30 ಗಂಟೆಯ ಒಳಗೆ ಎಲ್ಲಾ ವಿದ್ಯಾರ್ಥಿಗಳು ಬೀದರ್‌ ಕೋಟೆಯ ಒಳಗಡೆ ಇರುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಏರ್‌ ಶೋ ವೀಕ್ಷಿಸಬೇಕೆಂದು ಅವರು ತಿಳಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!