ನೌಕಾಪಡೆ ಸೇರಿದ ಐಎನ್‌ಎಸ್‌ ವಿಕ್ರಾಂತ್:‌ ಪ್ರಧಾನಿ ಮೋದಿ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಎನ್‌ಎಸ್ ವಿಕ್ರಾಂತ್ ಇಂದು ಪ್ರಧಾನಿ ಮೋದಿಯವರ ಕೈಯಿಂದ ನೌಕಾಪಡೆಗೆ ಸೇರ್ಪಡೆಯಾಗಿದೆ.  ಭಾರತದ ಮೊದಲ ವಿಮಾನವಾಹಕ ನೌಕೆ INS-ವಿಕ್ರಾಂತ್ ಹೆಸರನ್ನು ಯುದ್ಧನೌಕೆಗೆ ಇಡಲಾಗಿದೆ. ಬಾಹುಬಲಿ ಎಂದು ಕರೆಯಲ್ಪಡುವ INS ವಿಕ್ರಾಂತ್ 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲವಿದೆ. ನೌಕೆಯು ಗಂಟೆಗೆ ಗರಿಷ್ಠ 28 ನಾಟಿಕಲ್ ಮೈಲುಗಳಷ್ಟು (51.8 kmph) ವೇಗದಲ್ಲಿ ಚಲಿಸುತ್ತದೆ. ಇದು 30 ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಈ ಹಡಗು 45,000 ಟನ್ ತೂಕವಿದ್ದು, ಈ ಯುದ್ಧನೌಕೆಯಲ್ಲಿ 1,700 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಯುದ್ಧದ ಸಮಯದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಅದರಲ್ಲಿ 16 ಹಾಸಿಗೆಗಳ ಸಣ್ಣ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ನೌಕೆಯು 2 ಆಪರೇಷನ್ ಥಿಯೇಟರ್‌ಗಳು, ಲ್ಯಾಬ್‌ಗ, ಐಸಿಯು ಮತ್ತು CT ಸ್ಕ್ಯಾನ್ ಯಂತ್ರವನ್ನು ಹೊಂದಿದೆ. ಈ ಆಸ್ಪತ್ರೆ ಐದು ವೈದ್ಯಕೀಯ ಅಧಿಕಾರಿಗಳು ಮತ್ತು 15 ಆರೋಗ್ಯ ಸಿಬ್ಬಂದಿಯನ್ನು ಒಳಗೊಂಡಿದೆ.

ಈ ಹಡಗಿನೊಳಗೆ 2,300 ವಿಭಾಗಗಳನ್ನು ನಿರ್ಮಿಸಲಾಗಿದೆ. ಈ ಯುದ್ಧನೌಕೆಯ ತಯಾರಿಕೆಯು 2005 ರಲ್ಲಿ ಕೇರಳದ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭವಾಯಿತು. ಸಾರ್ವಜನಿಕ ವಲಯದ ಸಂಸ್ಥೆಗಳಾದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಬಿಎಚ್‌ಇಎಲ್ ಮತ್ತು ಖಾಸಗಿ ಕಂಪನಿ ಎಲ್ & ಟಿ ಮತ್ತು ಇತರ ಸಂಸ್ಥೆಗಳು ಈ ಯುದ್ಧನೌಕೆ ತಯಾರಿಕೆಯಲ್ಲಿ ತೊಡಗಿಕೊಂಡಿವೆ.

Aircraft carrier INS Vikrant: ప్రధాని మోదీ చేతుల మీదుగా నౌకాదళంలోకి ఐఎన్ఎస్ విక్రాంత్

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!