ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭೀಕರ ದಾಳಿ ವಿಶ್ವವನ್ನೇ ಬೆಚ್ಚಿಬೀಳಿಸಿದ್ದು, ದಿನದಿಂದ ದಿನಕ್ಕೆ ಯುದ್ಧ ತೀವ್ರಗೊಳ್ಳುತ್ತಿದೆ. ಇದರ ನಡುವೆ ಹಮಾಸ್ ಉಗ್ರರ ಸಂಬಂಧಿತ ಕೆಲ ಪ್ರಮಖ ಎಕ್ಸ್(ಟ್ವಿಟರ್) ಖಾತೆಗಳನ್ನು ಡಿಲೀಟ್ ಮಾಡಲಾಗಿದೆ.
ಎಕ್ಸ್ ಸಿಇಒ ಲಿಂಡಾ ಯಕಾರಿಯೋ ಈ ಮಾಹಿತಿ ನೀಡಿದ್ದು, ಎಕ್ಸ್ ಖಾತೆಗಳಲ್ಲಿ ಭಯೋತ್ಪಾದನೆ, ಉಗ್ರವಾದವನ್ನು ಪ್ರಚುರ ಪಡಿಸುವ ವಿಡಿಯೋ, ಫೋಟೋ, ಸಂದೇಶಗಳನ್ನು ಹಾಕುತ್ತಿದ್ದಾರೆ. ಭಯೋತ್ಪಾದನೆ ಪ್ರಚೋದಿಸುವ ವಿಷಗಳನ್ನು ಟ್ವಿಟರ್‌ನಿಂದ ತೆಗೆದು ಹಾಕಲಾಗುತ್ತಿದೆ. ಇದೇ ವೇಳೆ ಹಮಾಸ್ ಉಗ್ರರ ಸಂಬಂಧಿತ ಕೆಲ ಪ್ರಮುಖ ಎಕ್ಸ್ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೂಕ್ಷ್ಮಿ ವಿಡಿಯೋಗಳು, ಫೋಟೋಗಳು, ಸಂದೇಶಗಳು ಎಕ್ಸ್‌ನಲ್ಲಿ ಹರಿದಾಡುತ್ತಿದೆ. ಉಗ್ರವಾದಕ್ಕೆ ಬೆಂಬಲ ನೀಡುವ, ಭಯೋತ್ಪಾದನೆಯನ್ನು ವಿಜ್ರಂಭಿಸುವ ಹಮಾಸ್ ಸಂಬಂಧಿತ ಕೆಲ ಎಕ್ಸ್ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ. 100ಕ್ಕೂ ಹೆಚ್ಚು ಖಾತೆಗಳು ಡಿಲೀಟ್ ಮಾಡಲಾಗಿದೆ ಎಂದು ಲಿಂಡಾ ಹೇಳಿದ್ದಾರೆ.
ಎಕ್ಸ್ ತನ್ನ ನಿಮಯದ ಪ್ರಕಾರ ಕೆಲಸ ಮಾಡುತ್ತಿದೆ. ಭಯೋತ್ಪಾದನೆ ಪ್ರಚೋದಿಸಲು ಸಾಧ್ಯವಿಲ್ಲ. ನರಮೇಧ, ಭೀಕರತೆಗೆ ಎಕ್ಸ್ ಬೆಂಬಲ ನೀಡುವುದಿಲ್ಲ ಎಂದಿದೆ. ಇದೀಗ ಎಕ್ಸ್ ಇಸ್ರೇಲ್ ಹಾಗೂ ಗಾಜಾ ಕುರಿತು ವಿಡಿಯೋ ಹಾಗೂ ಇತರ ಕೆಂಟೆಂಟ್ ಮೇಲೆ ತೀವ್ರ ನಿಗಾ ಇಟ್ಟಿದೆ. ಇದೇ ವೇಳೆ ಸುಳ್ಳು ಸುದ್ದಿಗಳನ್ನು, ವಿಡಿಯೋಗಳನ್ನು ಹರಡುವ ಮೇಲೂ ಕಣ್ಣಿಟ್ಟಿದೆ.