ವಿಮಾನ ಪ್ರಯಾಣದ ವೇಳೆ ಸಿಖ್ಖರು ಕಿರ್ಪಾನ್​ ಸಾಗಿಸಲು ಅವಕಾಶ: ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಮಾನ ನಿಲ್ದಾಣಗಳಲ್ಲಿ ಸಿಖ್​ ಸಮುದಾಯದ ಪ್ರಯಾಣಿಕರು ಮತ್ತು ನೌಕರರು ಕಿರ್ಪಾನ್​ ತೆಗೆದುಕೊಂಡು ಹೋಗುವ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವು ಮಾಡಿದೆ. ಈ ಮೂಲಕ ನಿರ್ದಿಷ್ಟ ಅಳತೆಯ ಕಿರ್ಪಾನ್​ ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಗಿದೆ.
ದೇಶಿಯ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಇದನ್ನು ಸಾಗಿಸಲು ಅವಕಾಶ ನೀಡಲಾಗಿದ್ದು, ಆದರೆ ಕಿರ್ಪಾನ್​ ಉದ್ದ 15.23 ಸೆಂಟಿಮೀಟರ್​ (6 ಇಂಚು) ಮೀರಬಾರದು ಎಂದು ನಾಗರಿಕ ವಿಮಾನಯಾನ ಇಲಾಖೆ ಹೊಸ ಆದೇಶ ಹೊರಡಿಸಿದೆ.
ಸಿಖ್ಖರ ಐದು ವಿಶಿಷ್ಟ ಗುರುತುಗಳಲ್ಲಿ ಕಿರ್ಪಾನ್ (ಚಾಕು) ಕೂಡ ಒಂದಾಗಿದೆ.
ಡೊಮೆಸ್ಟಿಕ್ ಟರ್ಮಿನಲ್‌ಗಳಿಂದ ಮಾತ್ರ ಕಾರ್ಯನಿರ್ವಹಿಸುವ ಭಾರತದೊಳಗೆ ಭಾರತೀಯ ವಿಮಾನಗಳಲ್ಲಿ ಪ್ರಯಾಣಿಸುವಾಗ ಇದನ್ನು ಅನುಮತಿಸಲಾಗಿದೆ’ ಎಂದು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಈ ಹಿಂದೆ ಅಮೃತಸರ್​ ವಿಮಾನ ನಿಲ್ದಾಣದಲ್ಲಿ ಕಿರ್ಪಾನ್ ಧರಿಸಿದ ಕಾರಣಕ್ಕೆ ಸಿಖ್​ ಉದ್ಯೋಗಿಯೊಬ್ಬರಿಗೆ ಕರ್ತವ್ಯ ನಿರ್ವಹಿಸದಂತೆ ನಿರ್ಬಂಧ ಹೇರಲಾಗಿತ್ತು. ಈ ಬಗ್ಗೆ ಸಾಕಷ್ಟು ಸಿಖ್​ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!