ಟೆಸ್ಟ್ ಕ್ರಿಕೆಟ್‌’ನಲ್ಲಿ ಅಶ್ವಿನ್ ಮತ್ತೊಂದು ಮೈಲುಗಲ್ಲು: ಸ್ಟೇನ್ ಹಿಂದಿಕ್ಕಿ ಹೆಚ್ಚು ವಿಕೆಟ್ ಪಡೆದ ವಿಶ್ವದ 7ನೇ ಬೌಲರ್​ ಎಂಬ ಹೆಗ್ಗಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶ್ರೀಲಂಕಾ ವಿರುದ್ಧದ ಅಹರ್ನಿಶಿ ಟೆಸ್ಟ್​​ನ 2ನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್​ ಪಡೆಯುವ ಮೂಲಕ ಭಾರತದ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್​ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಟೇನ್​ರನ್ನು ಹಿಂದಿಕ್ಕಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಧನಂಜಯ ಡಿಸಿಲ್ವಾ ವಿಕೆಟ್​ ಪಡೆಯುವ ಮೂಲಕ ಒಟ್ಟು ವಿಕೆಟ್ ಪಡೆದ ಸಂಖ್ಯೆ 440ಕ್ಕೆ ಏರಿಸಿಕೊಂಡರು. ಈ ಮೂಲಕ ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ವಿಶ್ವದ 7ನೇ ಬೌಲರ್​ ಎನಿಸಿಕೊಂಡರು.
ಅಶ್ವಿನ್​ ದಿಗ್ಗಜರಾದ ಕಪಿಲ್​ದೇವ್(434)​, ರಿಚರ್ಡ್​ ಹ್ಯಾಡ್ಲಿ(431), ರಂಗನಾ ಹೆರಾತ್(433)​ರನ್ನು ಹಿಂದಿಕ್ಕಿದ್ದರು. ಇದೀಗ ಡೇಲ್ ಸ್ಟೇನ್(439)ರನ್ನು ಹಿಂದಿಕ್ಕಿದ್ದಾರೆ.
ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ಮುರಳೀಧರನ್​ 800 ವಿಕೆಟ್​ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್​(708), ಇಂಗ್ಲೆಂಡ್​ನ ಜೇಮ್ಸ್ ಆ್ಯಂಡರ್ಸನ್​(640), ಭಾರತದ ಅನಿಲ್ ಕುಂಬ್ಳೆ(619), ಆಸ್ಟ್ರೇಲಿಯಾದ ಗ್ಲೇನ್ ಮೆಗ್​ಗ್ರಾತ್(563), ಇಂಗ್ಲೆಂಡ್​ ಸ್ಟುವರ್ಟ್ ಬ್ರಾಡ್​(537) ವಿಂಡೀಸ್​ನ ಕರ್ಟ್ನಿ ವಾಲ್ಶ್​(519) ಮಾತ್ರ ಅಶ್ವಿನ್​ಗಿಂತ ಮುಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!