ಭಾರತದಲ್ಲಿ ಸರಕು ವಿಮಾನ ಪರಿವರ್ತನಾ ಕೇಂದ್ರ ಸ್ಥಾಪಿಸುವುದಾಗಿ ಘೋಷಿಸಿದ ವಿಮಾನ ತಯಾರಕ ಬೋಯಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ಪ್ರಸಿದ್ಧ ವಿಮಾನ ತಯಾರಿಕಾ ಕಂಪನಿಯಾದ ಬೋಯಿಂಗ್‌ ಭಾರತದಲ್ಲಿ ತನ್ನ ಪರಿವರ್ತನಾ ಘಟಕವನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಪ್ರಸ್ತುತ ಸರಕು ಸಾಗಣಾ ವಿಮಾನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಪ್ರಯಾಣಿಕ ವಿಮಾನಗಳನ್ನು ಸರಕು ಸಾಗಣಾ ವಿಮಾನವನ್ನಾಗಿ ಪರಿವರ್ತಿಸಬಲ್ಲ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲು ಯೋಚಿಸಲಾಗಿದೆ ಎಂದು ಅಮೆರಿಕದ ಕಾರ್ಯನಿರ್ವಾಕರು ಹೇಳಿದ್ದಾರೆ.

ಜಾಗತಿಕ ʼಸರಕು ಸಾಗಣಾ ಕೇಂದ್ರʼವಾಗಿ ಹೊರಹೊಮ್ಮುವ ಭಾರತ ಗುರಿಗೆ ಇದು ಪೂರಕವಾಗಲಿದ್ದು ಬೋಯಿಂಗ್ ಪೂರೈಕೆ ಸರಪಳಿಗೆ 1‌ ಬಿಲಿಯನ್‌ ಡಾಲರ್‌ ಮೌಲ್ಯದ ಸೋರ್ಸಿಂಗ್‌ ಅನ್ನು ಒದಗಿಸಲಿದೆ ಎಂದು ಮುಖ್ಯ ಕಾರ್ಯತಂತ್ರ ಅಧಿಕಾರಿ ಮಾರ್ಕ್ ಅಲೆನ್ ಹೇಳಿದ್ದಾರೆ. ಯಾವಾಗ, ಎಲ್ಲಿ ಸ್ಥಾಪಿಸಲಾಗುತ್ತದೆ ಎಂಬುದರ ಕುರಿತು ಕಂಪನಿ ಇನ್ನೂ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಮೂಲಗಳು ವರದಿ ಮಾಡಿವೆ.

ಭಾರತದಲ್ಲಿ ವಿಸ್ತರಿಸಲು ಬೋಯಿಂಗ್‌ ಯೋಚಿಸುತ್ತಿದ್ದು ಈ ನಿಟ್ಟಿನಲ್ಲಿ ಪ್ರಸ್ತುತ ಬೆಳವಣಿಗೆಯು ನಡೆದಿದೆ. ಈ ಹಿಂದೆ ಫೆಬ್ರವರಿಯಲ್ಲಿ ವಿಮಾನದ ಬಿಡಿಭಾಗಗಳಿಗಾಗಿ ಲಾಜಿಸ್ಟಿಕ್ಸ್ ಕೇಂದ್ರವನ್ನು ಸ್ಥಾಪಿಸಲು 24 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡುವುದಾಗಿ ಕಂಪನಿ ಘೋಷಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!