SPECIAL STORY| ಜನಾಕರ್ಷಣೆಗೊಂಡ ಕೋಟೆ ನಾಡಿನ ಯುವಕರ ಸೋಗು

– ಜಗದೀಶ ಎಂ.ಗಾಣಿಗೇರ

ಮುಳಗಡೆ ನಗರಿ ಎಂದು ಕರೆಯುವ ಕೋಟೆ ನಾಡು ಬಾಗಲಕೋಟೆಯ ಹೋಳಿ ಹಬ್ಬದ ಅಂಗವಾಗಿ ಮೂರು ದಿನ ನಡೆಯುವ ಸೋಗಿನ ಪ್ರದರ್ಶನ ಜನಾಕರ್ಷಣೆ ಪಡೆದುಕೊಂಡಿದೆ.

ನಗರದ ಹಳಪೇಟ ಮಡುವಿನ ಯುವಕರು , ಕಿಲ್ಲಾ ಓಣಿಯ ವಿಕ್ರಂ ಯುವಕ ಮಂಡಳಿ ಮತ್ತು ಹಿರಿಯರು ಸೇರಿಕೊಂಡು ಸಂತ ಎಂದು ಪ್ರಸಿದ್ದಿ ಪಡೆದ ಸಿದ್ದೇಶ್ವರ ಶ್ರೀಗಳು ,ಛತ್ರಪತಿ ಶಿವಾಜಿ, ಭಾರತಾಂಬೆ, ಸಾಲುಮರದ ತಿಮ್ಮಕ್ಕ,ರೈತರು, ದೇಶಭಕ್ತರು, ಹೋರಾಟಗಾರರು ಸೇರಿದಂತೆ ಹಲವಾರು ರೂಪಕಗಳನ್ನು ತೊಟ್ಟ ಸೋಗಿನ ಪ್ರದರ್ಶನ ನಗರದ ಜನರ ಮನ ಗೆಲ್ಲುವಲ್ಲಿ ಯಶಸ್ಚಿಯಾಯಿತು.

ಸಂತ ಸಿದ್ದೇಶ್ವರ ಶ್ರೀಗಳ ಪ್ರವಚನದ ಭಂಗಿ, ಪದ್ಮಶ್ರೀ ಸಾಲುಮರದ ತಿಮ್ಮಕ್ಕನ ಪರಿಸರ ಪ್ರೇಮ ಮೆರೆಯುವ, ವೃರಿಗಳನ್ನು ಹಿಮ್ಮೆಟ್ಟಿಸಿದ ಒಣಕೆ ಓಬವ್ಬ ಹಾಗೂ ಕಿತ್ತೂರ ರಾಣಿ ಚನ್ನಮ್ಮ,ಸಂಗೊಳ್ಳಿ ರಾಯಣ್ಣ ರೂಪಕ ತೊಟ್ಟ ಬಾಗಲಕೋಟೆ ಹಲಪೇಟ ಮಡುವಿನ ಗಜಾನನ ಯುವಕ ಮಂಡಳದವರು ಜನರನ್ನು ಆಕರ್ಷಿಸುವಂತೆ ಮಾಡಿದರು.

ಸೈನಿಕರ ಸಮ್ಮುಖದಲ್ಲಿ ಸಿಂಹಾಸನದಲ್ಲಿ ಕುಳಿತ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಉದ್ಯೋಗವಿಲ್ಲದೇ ಇರುವ ದಂಡಪಿಂಡಗಳ ಪ್ರದರ್ಶನ ರೂಪಕ ತೊಟ್ಟ ವಿಕ್ರಮ ಯುವಕ ಮಂಡಳದವರ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಪಾಗಿಟ್ಟ ಭಗತ್ ಸಿಂಗ್,ಸುಖದೇವ,ರಾಜಗುರು ಅವರ ವೇಷವನ್ನು ತೊಟ್ಟ ನರೇಂದ್ರ ಯುವಕ ಮಂಡಳಿ ಯುವಕರ ಸೋಗಿನ ಪ್ರದರ್ಶನ ಆಕರ್ಷಣೆ ಪಡೆದುಕೊಂಡಿತು.

ಸಾರ್ವಜನಿಕರಿಂದ ಜೈಕಾರದ ಘೋಷಣೆ: ನಗರದ ಪ್ರಮುಖರಸ್ತೆಗಳಲ್ಲಿ ಸೋಗಿನ ಪ್ರದರ್ಶನ ಸಾಗುತ್ತಿದ್ದಾಗ ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಜನರು ಜೈಕಾರದ ಘೋಷಣೆಗಳು ಮೊಳಗಿದವು. ರಾತ್ರಿ ಶುರುವಾಗುವ ಸೋಗಿನ ಪ್ರದರ್ಶನ ಮಧ್ಯರಾತ್ರಿ ವರೆಗೂ ನಗರದಲ್ಲಿ ನಡೆಯುತ್ತದೆ.ಆ ಓಣಿಯಲ್ಲಿ ಸೋಗಿನ ಬಂಡಿ, ಟ್ರ್ಯಾಕ್ಟರ ಆಗಮಿಸಿದಾಗ ಜನರ ಚಪ್ಪಾಳೆ, ಕೇಕೆ ಹಾಕುವ ಮೂಲಜ ಸೋಗಿನ ಪ್ರದರ್ಶನದಲ್ಲಿ ಭಾಗವಹಿಸಿದವರಿಗೆ ಉತ್ಸಾಹ ತುಂಬುವುದು ವಿಶೇಷ.

ಸೋಗಿನ ಮೆರವಣಿಗೆ: ಸೋಗಿನ ಮೆರವಣಿಗೆ ಹಳಪೇಟ ಮಡುವಿನಿಂದ ಆರಂಭವಾಗಿ ಟೆಂಗಿನಮಠ ರಸ್ತೆ ಮೂಲಕ,ಚರಂತಿಮಠ ರಸ್ತೆ,ಮಾರವಾಡಗಲ್ಲಿ,ಎಂ.ಜಿ.ರಸ್ತೆ,ಕಿಲ್ಲಾ ಗಲ್ಲಿ,ಹಳೇ ಅಂಚೆ ಕಚೇರಿ,ಪಂಕಾಮಸೀದಿ ಮೂಲಕ ಹಾಯ್ದು ಮರಳಿ ಹಳಪೇಟು ಮಡು ಸೇರಿತು.

ಹೋಳಿ ಹಬ್ಬದ ಅಂಗವಾಗಿ ಬಾಗಲಕೋಟೆಯಲ್ಲಿ ಮೂರು ದಿನ ಪ್ರತಿ ಓಣಿಯ ಸೋಗಿನ ಪ್ರದರ್ಶನ ನಡೆಯುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!