5ಜಿ- ಸರ್ಕಾರದ ವೇಗಕ್ಕೆ ಏರ್ಟೆಲ್ ಅಧ್ಯಕ್ಷನ ಪ್ರಶಂಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರ್ಕಾರಿ ಕೆಲಸವೆಂದರೆ ಅದು ನಿಧಾನಗತಿಯ ಆಮೆಯಂತೆ ಎಂಬುದು ಲೋಕಾರೂಢಿಯಲ್ಲಿದೆ. ಆದರೆ ಪ್ರಸ್ತುತ ಕೇಂದ್ರ ಸರ್ಕಾರವು ಕಾರ್ಯ ನಿರ್ವಹಿಸುತ್ತಿರೋ ವೇಗಕ್ಕೆ ಈ ದೇಶದ ಪ್ರಸಿದ್ಧ ಟಲಿಕಾಂ ಕಂಪನಿಗಳಲ್ಲೊಂದಾದ ಭಾರ್ತಿ ಏರ್ಟೆಲ್‌ ನ ಅಧ್ಯಕ್ಷ ಸುನೀಲ್‌ ಮಿತ್ತಲ್‌ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಏರ್ಟೆಲ್ ಕೂಡ ಭಾಗವಹಿಸಿತ್ತು. ತಾನು ಸ್ವಾಧೀನ ಪಡಿಸಿಕೊಂಡ ತರಂಗಾಂತರಗಳಿಗೆ ಆರಂಭಿಕ ಪಾವತಿ ಮಾಡಿದ ಕೆಲವೇ ಗಂಟೆಗಳಲ್ಲಿ ಇ-ಬ್ಯಾಂಡ್ ಏರ್‌ವೇವ್‌ಗಳ ಜೊತೆಗೆ 5G ತರಂಗಾಂತರ ಹಂಚಿಕೆ ಪತ್ರವನ್ನು ಸರ್ಕಾರ ಏರ್ಟೆಲ್‌ ಗೆ ಹಸ್ತಾಂತರಿಸಿತ್ತು. ಸರ್ಕಾರದ ಈ ಕಾರ್ಯವನ್ನು ಸುನೀಲ್‌ ಮಿತ್ತಲ್‌ ಶ್ಲಾಘಿಸಿದ್ದಾರೆ.

“ಏರ್‌ಟೆಲ್ ಸ್ಪೆಕ್ಟ್ರಮ್ ಬಾಕಿ ರೂ. 8,312.4 ಕೋಟಿ ಪಾವತಿಸಿತು ಪಾವತಿ ಮಾಡಿದ ಕೆಲವೇ ಗಂಟೆಗಳಲ್ಲಿ ಹಂಚಿಕೆ ಪತ್ರವನ್ನು ನೀಡಲಾಯಿತು ಭರವಸೆ ನೀಡಿದಂತೆ ಸ್ಪೆಕ್ಟ್ರಮ್‌ನೊಂದಿಗೆ E ಬ್ಯಾಂಡ್ ಹಂಚಿಕೆಯನ್ನು ನೀಡಲಾಯಿತು. ಟೆಲಿಕಾಮ್‌ ಸಚಿವಾಲಯವದೊಂದಿಗಿನ 30 ವರ್ಷಗಳ ನನ್ನ ಅನುಭವದಲ್ಲಿ ಈ ರೀತಿಯಾಗುತ್ತಿರುವುದು ಇದೇ ಮೊದಲು, ವ್ಯವಹಾರವೆಂದರೆ ಹೀಗಿರಬೇಕು” ಎಂದು ಮಿತ್ತಲ್‌ ಹೇಳಿಕೆಯೊಂದರಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದುವರೆದು “ಯಾವುದೇ ಗಡಿಬಿಡಿಯಿಲ್ಲ, ಯಾವುದೇ ಅನುಸರಣೆಯಿಲ್ಲ, ಕಾರಿಡಾರ್‌ಗಳ ಸುತ್ತಲೂ ಓಡುವುದಿಲ್ಲ. ಎಂತಹ ಬದಲಾವಣೆ ! ಇದು ಈ ರಾಷ್ಟ್ರವನ್ನು ಪರಿವರ್ತಿಸಲಬಲ್ಲ ಬದಲಾವಣೆಗಳಲ್ಲೊಂದು, ಇದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗ ಬಯಸುವ ಕನಸುಗಳಿಗೆ ಶಕ್ತಿ ನೀಡುತ್ತದೆ” ಎಂದು ಮಿತ್ತಲ್‌ ಸರ್ಕಾರವನ್ನು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!