ಐಶ್ವರ್ಯಾ ರೈ ಜೊತೆ ಡಿವೋರ್ಸ್ ಗಾಸಿಪ್: ಅಂತೂ ಅಭಿಷೇಕ್ ಬಚ್ಚನ್ ಕೊಟ್ರು ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಕುರಿತು ನಾನಾ ರೀತಿಯ ವಿಚಾರಗಳು ಚರ್ಚೆಯಾಗುತ್ತಿವೆ. ಈ ಕುರಿತು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನಿನ್ನೂ ವಿವಾಹಿತ ಎಂದು ಮಾತನಾಡಿದ್ದಾರೆ.

2024ರ ಒಲಿಂಪಿಕ್ಸ್ ವೀಕ್ಷಿಸುವುದಕ್ಕೆ ಅಭಿಷೇಕ್ ಪ್ಯಾರಿಸ್‌ಗೆ ತೆರಳಿದ್ದರು. ಈ ವೇಳೆ ನಟ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಮದುವೆಯ ಉಂಗುರ ತೋರಿಸಿ ‘ನಾನಿನ್ನೂ ವಿವಾಹಿತ’ ಎಂದು ಮಾತನಾಡಿದ್ದಾರೆ. I Am Still Married ಎನ್ನುವ ಮೂಲಕ ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಈ ಮದುವೆಯ ನಂತರ ಮಗಳು ಆರಾಧ್ಯಾ ಜೊತೆ ನ್ಯೂಯಾರ್ಕ್ ವೆಕೇಷನ್‌ಗೆ ನಟಿ ತೆರಳಿದ್ದರು. ಆಗ ಅಭಿಷೇಕ್ ಇವರ ಜೊತೆ ಇಲ್ಲದೇ ಇರೋದು ಡಿವೋರ್ಸ್ ವದಂತಿ ಮತ್ತೆ ಮುನ್ನೆಲೆಗೆ ಬಂದಿತ್ತು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!