ದಾರಿತಪ್ಪಿಸುವ ಸುದ್ದಿಗಳನ್ನು ಪ್ರಕಟಿಸಿದರೆ ಮಾಧ್ಯಮಕ್ಕೆ ಬೀಗ: ಬಾಂಗ್ಲಾ ನೂತನ ಸರ್ಕಾರ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾರಿತಪ್ಪಿಸುವ ಸುದ್ದಿಗಳನ್ನು ಪ್ರಕಟಿಸಿದರೆ ಮಾಧ್ಯಮಗಳನ್ನು ಮುಚ್ಚುವುದಾಗಿ ಬಾಂಗ್ಲಾದೇಶದ ನೂತನ ಸರ್ಕಾರ ಎಚ್ಚರಿಕೆ ನೀಡಿದೆ.

ಮಧ್ಯಂತರ ಸರ್ಕಾರದ ಗೃಹ ವ್ಯವಹಾರಗಳ ಸಲಹೆಗಾರ ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ ಸಖಾವತ್ ಹೊಸೈನ್ ಅವರು ಬಾಂಗ್ಲಾದೇಶ ಮಾಧ್ಯಮವು ಸತ್ಯವನ್ನು ಎತ್ತಿಹಿಡಿಯಲು ವಿಫಲವಾಗಿದೆ. ಮಾಧ್ಯಮಗಳು ಸತ್ಯವನ್ನು ಎತ್ತಿಹಿಡಿಯದಿದ್ದಾಗ ರಾಷ್ಟ್ರವು ತತ್ತರಿಸುತ್ತದೆ ಎಂದು ಹೇಳಿದ್ದಾರೆ.

ಸುಳ್ಳು (Fake) ಅಥವಾ ದಾರಿತಪ್ಪಿಸುವ ಸುದ್ದಿಗಳನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅವುಗಳನ್ನು ಮುಚ್ಚುತ್ತೇವೆ. ಟಾಕ್ ಶೋಗಳಲ್ಲಿ ವಸ್ತುನಿಷ್ಠ ಚರ್ಚೆಯ ಕೊರತೆಯಿದೆ ಮತ್ತು ನಿಖರವಾದ ಮಾಹಿತಿಯನ್ನು ನೀಡಲು ಮಾಧ್ಯಮಗಳು ವಿಫಲವಾಗಿವೆ ಎಂದು ಆರೋಪಿಸಿದರು.

ಮೀಸಲಾತಿ ವಿರುದ್ಧದ ಹೋರಾಟದಲ್ಲಿ ಶೇಖ್‌ ಹಸೀನಾ ರಾಜೀನಾಮೆ ನೀಡಿದ್ದು ನೂತನ ಸರ್ಕಾರ ರಚನೆಯಾಗುವವರೆಗೂ ಮಧ್ಯಂತರ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಬ್ಯಾಂಕರ್‌, ನೊಬೆಲ್‌ ಬಹುಮಾನ ವಿಜೇತ ಮೊಹಮ್ಮದ್‌ ಯೂನಸ್‌ ಅವರು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ನೇಮಕವಾಗಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!