ರಾಷ್ಟ್ರೀಯ ಭಾಷೆ ಅಲ್ಲ ಎಂದ ಮೇಲೆ ಹಿಂದಿಗೆ ಡಬ್ ಮಾಡಿ ಸಿನಿಮಾ ಯಾಕೆ ರಿಲೀಸ್ ಮಾಡುತ್ತೀರಿ?: ಕಿಚ್ಚಗೆ ಅಜಯ್ ದೇವಗನ್ ಪ್ರಶ್ನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿಕೆ ನೀಡಿದ್ದ ನಟ ಕಿಚ್ಚ ಸುದೀಪ್ ಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರಶ್ನೆಮಾಡಿದ್ದು, , ‘ಹಾಗಾದರೆ ಹಿಂದಿ ಭಾಷೆಗೆ ಡಬ್ ಮಾಡಿ ಯಾಕೆ ಸಿನಿಮಾ ರಿಲೀಸ್ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಜಯ್ ದೇವಗನ್, ಪ್ರೀತಿಯ ಸಹೋದರ ಕಿಚ್ಚ ಸುದೀಪ್ ಅವರೇ, ನಿಮ್ಮ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಮಾತೃ ಭಾಷೆ ಚಿತ್ರಗಳನ್ನು ಹಿಂದಿಯಲ್ಲೇಕೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ ?ಎಂದು ಕೇಳಿದ್ದಾರೆ.
ಹಿಂದಿ ನಮ್ಮ ಮಾತೃ ಭಾಷೆ. ಅದು ರಾಷ್ಟ್ರಭಾಷೆಯಾಗಿದ್ದು ಎಂದಿಗೂ ರಾಷ್ಟ್ರಭಾಷೆಯಾಗಿಯೇ ಇರುತ್ತದೆ ಎಂದು ಅಜಯ್ ದೇವಗನ್ ಹೇಳಿದ್ದಾರೆ.
ಇನ್ನು ಅಜಯ್ ದೇವಗನ್ ಟ್ವೀಟ್ ಗೆ ನೆಟ್ಟಿಗರ ಪರ ವಿರೋಧಗಳು ಶುರುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!