ಮುಂಬೈ ನಾರ್ಕೋಟಿಕ್‌ ಪೋಲಿಸರ ಭರ್ಜರಿ ಕಾರ್ಯಾಚರಣೆ: 48 ಲಕ್ಷರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆಯ ವಿರುದ್ಧದ ಹೋರಾಟದಲ್ಲಿ ಮುಂಬೈ ನಾರ್ಕೋಟಿಕ್‌ ಭರ್ಜರಿ ಕಾರ್ಯಾಚರಣೆ ನಡೆಸಿದ್ದು 48 ಲಕ್ಷ ರೂಪಾಯಿ ಮೌಲ್ಯದ 240 ಗ್ರಾಂ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಡ್ರಗ್‌ ಪೆಡ್ಲರ್‌ ಗಳನ್ನು ಪೋಲೀಸರು ಬಂಧಿಸಿದ್ದಾರೆ.

ನಾರ್ಕೋಟಿಕ್ ಸೆಲ್‌ನ ಆಜಾದ್ ಮೈದಾನ ಮತ್ತು ಘಾಟ್‌ಕೋಪರ್ ಘಟಕಗಳು ಎರಡು ವಿಭಿನ್ನ ಸ್ಥಳಗಳಿಂದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ ಎಂದು ಮೂಲಗಳು ವರದಿ ಮಾಡಿವೆ.

ಹಿರಿಯ ಇನ್ಸ್‌ಪೆಕ್ಟರ್ ರಾಜೇಂದ್ರ ದೋಹಿಫೋಡೆ ಮತ್ತು ಪಿಎಸ್‌ಐ ಪ್ರಮೋದ ಅವಾಲೆ ನೇತೃತ್ವದ ಪೊಲೀಸ್ ತಂಡವು 35 ಗ್ರಾಂ ಎಂಡಿ ಹೊಂದಿದ್ದ ಆರೋಪಿಗಳಲ್ಲಿ ಒಬ್ಬನನ್ನು ಘಾಟ್‌ಕೋಪರ್‌ನಿಂದ ಬಂಧಿಸಿದೆ. ಆರೋಪಿಯನ್ನು ರಿಜ್ವಾನ್ ಸಯ್ಯದ್ (42) ಎಂದು ಗುರುತಿಸಲಾಗಿದೆ.

ಹೆಚ್ಚಿನ ವಿಚಾರಣೆ ನಡೆಸಿದಾಗ, ಎರಡನೇ ಆರೋಪಿ ಶಹನವಾಜ್ ಅನ್ಸಾರಿ ತನಗೆ ಡ್ರಗ್ಸ್ ಸರಬರಾಜು ಮಾಡಿದ್ದನ್ನು ಸೈಯ್ಯದ್ ಬಹಿರಂಗಪಡಿಸಿದ್ದಾನೆ. ಅನ್ಸಾರಿ ಅವರ ಬಳಿ 115 ಗ್ರಾಂ ಎಂಡಿ ಪತ್ತೆಯಾಗಿದೆ. ಪೋಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!