ರೈಲ್ವೆ ಬ್ರಿಡ್ಜ್‌, ಜೈಲುಗೋಡೆ ಸ್ಫೋಟಿಸಲು ಯತ್ನಿಸಿದ್ದ ಅಜಯ್ 14 ವರ್ಷ ಜೈಲು ಶಿಕ್ಷೆಗೆ ಗುರಿಯಾದರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಜಯ್ ಜಗದಂಬಾ ಸಹಾಯ್ ಅವರು ಫಿಜಾಬಾದ್ ಜಿಲ್ಲೆಯ ಸಾಹಿಬಗಂಜ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಆಗ್ರಾ ಜಿಲ್ಲಾ ಜೈಲಿನ ಡೆಪ್ಯುಟಿ ಜೈಲರ್ ಆಗಿದ್ದರು. 1942 ರಲ್ಲಿ ಬಲ್ವಂತ್ ರಜಪೂತ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ವೇಳೆ ಅಜಯ್ ವಿಧ್ವಂಸಕ ಗ್ಯಾಂಗ್‌ ಒಂದರ ಸದಸ್ಯರಾಗಿದ್ದರು. ಈ ಗ್ಯಾಂಗ್ ಬ್ರಿಟಿಷರ ಮೇಲಿನ ಸಿಟ್ಟಿಗೆ ರುಯಿ ಮಂಡಿ ರೈಲ್ವೆ ಕಮಾನು ಸೇತುವೆ, ಬಿಲೋಚ್‌ಪುರ ರೈಲ್ವೇ ಕ್ಯಾಬಿನ್ ಮತ್ತು ಜಿಲ್ಲಾ ಕಾರಾಗೃಹದ ಹೊರ ಗೋಡೆಯನ್ನು ಸ್ಫೋಟಿಸಲು ಪ್ರಯತ್ನಿಸಿತ್ತು. 25 ಮಾರ್ಚ್ 1943 ರಂದು, ಈ ಗ್ಯಾಂಗ್‌ ಸದಸ್ಯರಲ್ಲೊಬ್ಬರಾದ ಭೂದೇವ್ ಪಾಲಿವಾಲ್ ತಪ್ಪೊಪ್ಪಿಗೆಯ ಆಧಾರದ ಮೇಲೆ ಅಜಯ್‌ ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಅವರನ್ನು ಕ್ರಾಂತಿಕಾರಿ ಎಂದು ವರ್ಗೀಕರಿಸಲಾಯಿತು. ವಿಚಾರಣೆ ನಡೆಸಿದ ಆಗ್ರಾ ಸೆಷನ್ಸ್ ಕೋರ್ಟ್ 26 ಏಪ್ರಿಲ್ 1944 ರಂದು ತೀರ್ಪು ಪ್ರಕಟಿಸಿ, ಸ್ಫೋಟಕ ವಸ್ತುಗಳ ತಡೆ ಕಾಯಿದೆ VI ರ ಸೆಕ್ಷನ್ 3 ರ ಅಡಿಯಲ್ಲಿ ಮತ್ತು ಸೆಕ್ಷನ್ 3, 1908 ರಕಾಯಿದೆಯ ಅಡಿಯಲ್ಲಿ ಅಜಯ್‌ ಅವರಿಗೆ 14 ವರ್ಷ ಕಠಿಣ ಸೆರೆವಾಸ ವಿಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!