ಇದು ಮದುವೆ ಸೀಸನ್, 40 ದಿನದಲ್ಲಿ 32 ಲಕ್ಷ ವಿವಾಹ, 3.75 ಲಕ್ಷ ಕೋಟಿ ರೂಪಾಯಿ ವ್ಯಾಪಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದು ಮದುವೆ ಸೀಸನ್, ಎಲ್ಲಿ ನೋಡಿದ್ರೂ ಮದುವೆ, ಯಾರ್ ನೋಡಿದ್ರೂ ಮದುವೆ ಆಗ್ತಿದ್ದಾರೆ. ನವೆಂಬರ್ 4 ರಿಂದ ಡಿಸೆಂಬರ್ 14ವರೆಗೆ ಬರೋಬ್ಬರಿ 32 ಲಕ್ಷ ವಿವಾಹ ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ವ್ಯಾಪಾರಿಗಳು 3.75 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ಆಗಲಿದೆ ಎಂದು ಭಾರತ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಸಂಶೋಧನಾ ವಿಭಾಗ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಿಂದ ಈ ಅಂಕಿ ಅಂಶ ತಿಳಿದಿದೆ. ಸಾಮಾನ್ಯವಾಗಿ ನವೆಂಬರ್ ಡಿಸೆಂಬರ್‌ನಲ್ಲಿ ಸಾಕಷ್ಟು ಮದುವೆಗಳು ನಡೆಯುತ್ತವೆ. ದೆಹಲಿಯೊಂದರಲ್ಲೇ ಈ ಅವಧಿಯಲ್ಲಿ 3.5 ಲಕ್ಷಕ್ಕೂ ಅಧಿಕ ವಿವಾಹ ನೆರವೇರಲಿದೆ. ಅದರಿಂದಾಗಿ ೭೫ ಸಾವಿರ ವ್ಯವಹಾರ ನಡೆಯುವ ನಿರೀಕ್ಷೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 25 ಲಕ್ಷ ವಿವಾಹ ನೆರವೇರಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!