Tuesday, August 16, 2022

Latest Posts

ಅಜಂಗಢ, ರಾಮ್‌ಪುರ ಗೆಲುವು: ‘ಡಬಲ್ ಇಂಜಿನ್ ಸರ್ಕಾರದ’ ಕಲ್ಯಾಣ ನೀತಿಗಳ ಫಲಿತಾಂಶ ಎಂದ ಮೋದಿ, ಯೋಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಭದ್ರ ಕೋಟೆಯಾಗಿದ್ದ ಅಜಂಗಢ ಮತ್ತು ರಾಮ್‌ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವು ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ವ್ಯಾಪಕವಾದ ಸ್ವೀಕಾರ ಮತ್ತು ಬೆಂಬಲವನ್ನು ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
‘ಬೆಂಬಲ ನೀಡಿದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತರ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ಬರೆದಿದ್ದಾರೆ.

‘ಆಜಂಗಢ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿನ ಐತಿಹಾಸಿಕ ಗೆಲುವು ಗೌರವಾನ್ವಿತ ಪ್ರಧಾನಿಯವರ ನಾಯಕತ್ವದ ‘ಡಬಲ್ ಇಂಜಿನ್ ಬಿಜೆಪಿ ಸರ್ಕಾರದ’ ಕಲ್ಯಾಣ ನೀತಿಗಳ ಫಲಿತಾಂಶವಾಗಿದೆ. ಈ ಗೆಲುವು ಬಿಜೆಪಿಯ ಎಲ್ಲಾ ಶ್ರಮಶೀಲ ಕಾರ್ಯಕರ್ತರಿಗೆ ಸಮರ್ಪಿಸಲಾಗಿದೆ. . ಧನ್ಯವಾದಗಳು ಅಜಂಗಢದ ಜನರಿಗೆ” ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

ಜನರು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ರಾಜವಂಶ ಮತ್ತು ಜಾತಿವಾದಿ ಪಕ್ಷಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಸಂದೇಶವನ್ನು ಕಳುಹಿಸಿದ್ದಾರೆ ರಾಂಪುರದಿಂದ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ ಮತ್ತು ಅಜಂಗಢದಿಂದ ದಿನೇಶ್ ಲಾಲ್ ಯಾದವ್ ಗೆದ್ದಿದ್ದಾರೆ ಎಂದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಕ್ಷದ ನಾಯಕ ಅಜಮ್ ಖಾನ್ ಅವರು ಕ್ರಮವಾಗಿ ಅಜಂಗಢ ಮತ್ತು ರಾಂಪುರ ಕ್ಷೇತ್ರಗಳಿಗೆ ರಾಜೀನಾಮೆ ನೀಡಿದ ಕಾರಣ ಉತ್ತರ ಪ್ರದೇಶದಲ್ಲಿ ಉಪಚುನಾವಣೆ ನಡೆದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss