Tuesday, August 16, 2022

Latest Posts

ಕಣ್ಮನಸೆಳೆಯಿತು ಪುಣೆಯಿಂದ ಪಂಡರಪುರಕ್ಕೆ ಸಾಗಿದ ಲಕ್ಷಾಂತರ ಭಕ್ತರ ಪಾದಯಾತ್ರೆ!

ಹೊಸದಿಗಂತ ವರದಿ, ಬೀದರ್:

ವೆಂಕಟೇಶ್ ಮೊರಖಂಡಿಕರ

ದೇಶದ ಮಹಾರಾಷ್ಟ್ರದ ವಾರಕಾರಿ ಸಂಪ್ರಾದಾಯದ ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಕೋವಿಡ್-19 ಕರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ 2 ವರ್ಷಗಳಿಂದ ಪಂಡರಪುರದ ವಿಠ್ಠಲ-ರುಕ್ಮಣಿಯ ದರ್ಶನಕ್ಕೆ ಭಕ್ತರ್ಯಾರು ಆಷಾಡಿ ವಾರಿ ಮಾಡಿರಲಿಲ್ಲ. ಈ ವರ್ಷ ವಾರಕಾರಿ ಸಂಪ್ರಾದಾಯದ ಪಂಡರಿನಾಥನ ಭಕ್ತರು ಈ ವರ್ಷ ಹರ್ಷೋಲ್ಲಾಸದಿಂದ ಮಹಾರಾಷ್ಟ್ರದ ಆಳಂದಿಯಿಂದ ಪುಣೆ ಮಾರ್ಗವಾಗಿ ಪಂಡರಪುರಕ್ಕೆ ಆಷಾಡಿ ಮಾಸದ ಏಕದಾಶಿ ಅಂಗವಾಗಿ ವಿಶೇಷವಾಗಿ ಪಾದತಾತ್ರೆ ಕೈಗೊಂಡಿದ್ದು, ಮಹಾರಾಷ್ಟ್ರ ಗಡಿಯಲ್ಲಿರುವ ಬೀದರ ಜಿಲ್ಲೆಯ ವಾರಿಕಾರಿ ಸಂಪ್ರಾದಾಯದ ಸಾವಿರಾರು ಭಕ್ತರು ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಿಂದ ಪಾದಯಾತ್ರೆ ಕೈಗೊಂಡಿದ್ದಾರೆ.
ಬೀದರ ಜಿಲ್ಲೆಗೆ ಅನೇಕ ಶರಣರು-ಮಹಾತ್ಮರು, ಪುಣ್ಯಪುರುಷರು, ಸಾಧು-ಸಂತರು, ಶಿವ-ಪರಮಾತ್ಮ, ನರಸಿಂಹ ಸ್ವಾಮಿ, ಪಂಡುರಪೂದ ವಿಠ್ಠಲ, ತೃತಾ ಯುಗದಲ್ಲಿ ರಾಮ-ಲಕ್ಷ್ಮಣರು ಪಾದಸ್ಪರ್ಶ ಮಾಡಿದ್ದ ಪುಣ್ಯಭೂಮಿ ಬೀದರ ಜಿಲ್ಲೆಯಾಗಿದೆ.


ಬೀದರನಲ್ಲಿ ನಿಜಾಂಷಾಹಿ ಆಡಳಿತದಲ್ಲಿ ಪಂಡರಪುರದ ವಿಠಲ-ರುಕಮಾಯಿ ಪರಮ ಭಕ್ತ ದಾಮಾಜಿ ಪಂತರ ಸಾಲ ತಿರಿಸಿಲು ಸ್ವಯಂ ಪಂಡರಪುರದ ವಿಠಲ ಬೀದರಿಗೆ ಬಂದು ನಿಜಾಂನ ಸಾಲ ತಿರಿಸಿದ ಸಾಕ್ಷಾತ್ ಕುರುಹುಗಳು ಇಂದಿಗೂ ಬೀದರ ನಗರದ ಬೀದರ ಕೋಟೆಯಲ್ಲಿ ಕಾಣಬಹುದು.


ಬೀದರ ನಗರದ ಶಹಾಗಂಜ ಅಗಸಿಯಲ್ಲಿ ಪಂಡರಪುರದ ವಿಠಲನ ಒಂದು ಪಾದುಕೆ ಇದ್ದರೆ, ಬೀದರ ಕೋಟೆಯ ಮುಖ್ಯದ್ವಾರದಲ್ಲಿ ಒಂದು ಪಾದುಕೆಯಿದೆ. ಶಹಾಗಂಜ ಅಗಸಿಯಲ್ಲಿ ಒಂದು ಕಾಲು ಮತ್ತು ಬೀದರ ಕೋಟೆಯಲ್ಲಿ ಒಂದು ಕಾಲು ಇಟ್ಟಿರುವ ಸಾಕ್ಷಿಗಾಗಿ ಪಾಂಡುರಂಗನ ಪಾದಕುಗಳು ಕಾಣಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss