ಪೂರ್ವಾಗ್ರಹ ಬಿಟ್ಟು ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ಬ್ರಿಕ್ಸ್‌ ರಾಷ್ಟ್ರಗಳಿಗೆ ಕರೆನೀಡಿದ ಅಜಿತ್‌ ದೋವಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯಾವುದೇ ಪೂರ್ವಾಗ್ರಹವಿಲ್ಲದೇ ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ಬ್ರಿಕ್ಸ್‌ ರಾಷ್ಟ್ರಗಳಿಗೆ ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್‌ ಕರೆ ನೀಡಿದ್ದಾರೆ.

ಬ್ರೆಜಿಲ್, ಚೀನಾ, ರಷ್ಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡ ಐದು ರಾಷ್ಟ್ರಗಳ ಗುಂಪಾದ ಬ್ರಿಕ್ಸ್‌ ನ ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ” ಭಯೋತ್ಪಾದಕರು ಸಂವಹನ ಮಾಧ್ಯಮಗಳನ್ನು ಬಳಸದಂತೆ ನಿಗಾ ವಹಿಸುವ ಮೂಲಕ ಅವರು ದ್ವೇಷದ ಸಂಗತಿಗಳನ್ನು ಹರಡುವುದನ್ನು ತಡೆಯಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸೈಬರ್‌ ಭದ್ರತೆಯೂ ಅತಿ ಮುಖ್ಯವಾದದ್ದು. ಯಾವುದೇ ಪೂರ್ವಾಗ್ರಹಗಳಿಲ್ಲದೇ ಒಗ್ಗಟ್ಟಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕು” ಎಂದು ಅವರು ಹೇಳಿದ್ದಾರೆ.

ಬಹುಪಕ್ಷೀಯ ವ್ಯವಸ್ಥೆಯಲ್ಲಿ ತುರ್ತು ಸುಧಾರಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದ ಪರಿ ಹೀಗಿದೆ “ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಸುದಾರಣೆ ಬಹಳದೂರದಲ್ಲಿದೆ. ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಸದಸ್ಯನಾಗುವುದನ್ನು ಚೀನಾ ವಿರೋಧಿಸುತ್ತಿದೆ. ಸುಧಾರಣೆಯಿಲ್ಲದೇ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟ”

“ಕೋವಿಡ್‌ ಜಗತ್ತನ್ನು ಸ್ಪಷ್ಟವಾಗಿ ಬದಲಾಯಿಸಿದೆ. ಇದೇ ರೀತಿ ಮತ್ತೆ ಒಗ್ಗಟ್ಟಾಗಿ ಭವಿಷ್ಯದಲ್ಲಿ ತಲೆದೂರಬಹುದಾದ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ದೇಶಗಳ ನಡುವೆ ಇದೇ ರೀತಿಯ ಸಹಕಾರ ಅಗತ್ಯ. ಹವಾಮಾನ ಬದಲಾವಣೆಯ ಬಗ್ಗೆ ಚೀನಾ ಮತ್ತು ಪಶ್ಚಿಮದ ನಡುವೆ ಗಂಭೀರ ಭಿನ್ನಾಭಿಪ್ರಾಯಗಳಿವೆ, ಚೀನಾದ ನಾಯಕರು ಕಳೆದ ಕಾನ್ಫರೆನಸ್ಸ್‌ ಆಫ್‌ ಪಾರ್ಟಿ(ಸಿಒಪಿ) ಶೃಂಗದಲ್ಲಿ ಭಾಗವಹಿಸಿಲ್ಲ.” ಎನ್ನುವ ಮೂಲಕ ಚೀನಾವನ್ನು ಕುಟುಕಿದ್ದಾರೆ.

ಅಲ್ಲದೇ ರಕ್ಷಣಾ ಸಹಕಾರವು ಬಾಹ್ಯಾಕಾಶ ಮತ್ತು ಕಡಲ ಭದ್ರತೆಗೂ ಕೂಡ ಅನ್ವಯಿಸುತ್ತದೆ. ಕ್ವಾಡ್‌ನ ಸದಸ್ಯನಾಗಿ ಪೂರೈಕೆ ಸರಪಳಿಯನ್ನು ಸರಾಗವಾಗಿಸಲು ಇಂಡೋ ಫೆಸಿಫಿಕ್‌ ಭಾಗದಲ್ಲಿ ಮುಕ್ತ ವಾತಾವರಣ ಸ್ಥಾಪಿಸಲು ಭಾರತವು ಕರೆ ನೀಡುತ್ತದೆ ಎಂದು ಪರೋಕ್ಷವಾಗಿ ಈ ಭಾಗದಲ್ಲಿ ಚೀನಾದ ಹುನ್ನಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!