Thursday, July 7, 2022

Latest Posts

ಅಜಿತ್‌ ನಟನೆಯ ವಾಲಿಮೈ ಬಾಕ್ಸಾಫೀಸ್‌ ನಲ್ಲಿ ಕಮಾಲ್:‌ ಹತ್ತೇ ದಿನದಲ್ಲಿ 200 ಕೋಟಿ ಕಲೆಕ್ಷನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಕಾಲಿವುಡ್‌ ಸೂಪರ್‌ ಸ್ಟಾರ್‌ ಅಜಿತ್‌ ನಟನೆಯ ವಾಲಿಮೈ ಚಿತ್ರ ತೆರೆಕಂಡ ಹತ್ತೇ ದಿನಗಳಲ್ಲಿ 200 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಫೆ. 24 ರಂದು ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಯಾಗಿರುವ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ವ್ಯಾಪಾರ ಮಾಡುತ್ತಿದೆ.
ಈ ಚಿತ್ರದ ಜೊತೆಜೊತೆಗೆ ಬಿಡುಗಡೆ ಕಂಡ ಹಿಂದಿಯ ಆಲಿಯಾ ಭಟ್ ಅಭಿನಯದ ʼಗಂಗೂಬಾಯಿ ಕಥಿಯಾವಾಡಿʼ, ತೆಲುಗಿನ ಪವರ್‌ ಸ್ಟಾರ್ ಪವನ್ ಕಲ್ಯಾಣ್ ʼಭೀಮ್ಲಾ ನಾಯಕ್ʼ ಪ್ರಬಲ ಪೈಪೋಟಿ ಎದುರಿಸಿ ಗೆದ್ದಿರುವ ʼವಲಿಮೈʼ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಲ್‌ ಮಾಡಿದೆ.
ಸಿನಿ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ವಾಲಿಮೈ ವಿಶ್ವಾದ್ಯಂತ 202.64 ಕೋಟಿ ರು, ಕಲೆಕ್ಷನ್‌ ಮಾಡುವ ಮೂಲಕ ಭೀಮ್ಲಾ ನಾಯಕ್ ಪಟ್ಟಾರೆ ಕಲೆಕ್ಷನ್‌ ಅನ್ನು ಮೀರಿದೆ. ಬೀಮ್ಲಾ ಚಿತ್ರ 174.12 ಕೋಟಿ ಕಲೆಕ್ಷನ್ ಮಾಡಿದೆ. ಈವರೆಗೆ ಬಿಡುಗಡೆಯಾದ ಅಜಿತ್ ಚಿತ್ರಗಳಲ್ಲೇ ಇದು ಅತ್ಯಂತ ವೇಗವಾಗಿ 200 ಕೋಟಿ ಕಲೆಕ್ಷನ್ ಮಾಡಿರುವ ಚಿತ್ರವಾಗಿದೆ ಎಂದು ಮನೋಬಾಲಾ ಟ್ವೀಟ್ ಮಾಡಿದ್ದಾರೆ.
ಬೋನಿ ಕಪೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಹುಮಾ ಖುರೇಷಿ ನಾಯಕಿಯಾಗಿ ಮತ್ತು ಕಾರ್ತಿಕೇಯಾ ಗುಮ್ಮಕೊಂಡ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss