ಕೇರಳ ಬಜೆಟ್ ಮಂಡನೆ- ಆರ್ಥಿಕ ಸಮಸ್ಯೆಯಿಂದ ಪಾರು : ಹಣಕಾಸು ಸಚಿವ

ಹೊಸದಿಗಂತ ವರದಿ, ತಿರುವನಂತಪುರ:

2022-23ನೇ ಸಾಲಿನ ಕೇರಳ ರಾಜ್ಯ ಮುಂಗಡಪತ್ರವನ್ನು ವಿಧಾನಸಭೆಯಲ್ಲಿ ಶುಕ್ರವಾರ ಬೆಳಗ್ಗೆ ಹಣಕಾಸು ಖಾತೆ ಸಚಿವ ಕೆ.ಎನ್.ಬಾಲಗೋಪಾಲ್ ಮಂಡಿಸುತ್ತಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ರಾಜ್ಯವು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿ ಮುನ್ನಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಕೋವಿಡ್ ನ ಆತಂಕ ಕಡಿಮೆಯಾಗುತ್ತಿದ್ದಂತೆ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಈ ಮೂಲಕ ತೆರಿಗೆ ಆದಾಯ ಹೆಚ್ಚಳಗೊಂಡಿದೆ. ಜಿಎಸ್ ಟಿ ಆದಾಯದಲ್ಲಿ ಏರಿಕೆಯಾಗಿರುವುದು ಸಂತೋಷದ ವಿಚಾರವಾಗಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ ಸರಾಸರಿ ಶೇಕಡಾ 1.45ರಷ್ಟು ಹೆಚ್ಚಿದೆ ಎಂದು ನುಡಿದರು.

  • ಕಣ್ಣೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ.
  • ರಾಜ್ಯದಲ್ಲಿ ನಾಲ್ಕು ಐಟಿ ಕಾರಿಡಾರ್‌ಗಳ ನಿರ್ಮಾಣ.
  •  ಆರು ಪಥಗಳಾಗಿ ಅಭಿವೃದ್ಧಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66 ಗೆ ಸಮಾನಾಂತರವಾಗಿ ರಾಜ್ಯದಲ್ಲಿ ನಾಲ್ಕು ಐಟಿ ಕಾರಿಡಾರ್‌ಗಳನ್ನು ಸ್ಥಾಪನೆ.
  • ಕಣ್ಣೂರು ವಿಮಾನ ನಿಲ್ದಾಣದ ಅಭಿವೃದ್ಧಿಯಿಂದ ಐಟಿ ಉದ್ಯಮದಲ್ಲಿ ಹೆಚ್ಚಿನ ಸಾಮರ್ಥ್ಯ.
  • ಕೊಲ್ಲಂನಲ್ಲಿ ಐದು ಲಕ್ಷ ಚದರ ಅಡಿ ಅತ್ಯಾಧುನಿಕ ಮಾದರಿಯ ಐಟಿ ಪಾರ್ಕ್ ಸ್ಥಾಪನೆ.
  • ಕಡಿಮೆ ಬೆಲೆಗೆ ಭೂಮಿ ಖರೀದಿಸಲು ಕಾರಿಡಾರ್‌ಗಳಲ್ಲಿ ಸ್ಯಾಟಲೈಟ್ ಐಟಿ ಪಾರ್ಕ್‌ಗಳನ್ನು ನಿರ್ಮಿಸುವ ಉದ್ದೇಶ.
  •  ಮುಂದಿನ ಐದು ವರ್ಷಗಳಲ್ಲಿ ಐಟಿ ಉತ್ಪನ್ನಗಳ ಮತ್ತು ಸೇವೆಗಳ ರಫ್ತು ಹೆಚ್ಚಾಗಲಿದೆ.
  • ಟೆಕ್ನೋಪಾರ್ಕ್ ಸೇರಿದಂತೆ ಹಲವು ಕೇಂದ್ರಗಳನ್ನು ಅಭಿವೃದ್ಧಿ: ಕಿಫ್ ಬಿ ಸಂಸ್ಥೆ ಮೂಲಕ 100 ಕೋಟಿ ರೂ. ಮಂಜೂರು.
  • ಭೂಸ್ವಾದೀನ ನಿಯಮದಿಂದ ಉದ್ಯಾನವನಕ್ಕೆ 1000 ಕೋಟಿ ರೂ. ಗಳನ್ನು ಬಿಡುಗಡೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!