ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಸಿನಿಮಾ ಬಿಡುಗಡೆ ಆಗಿದೆ. ಇಂದು (ಫೆಬ್ರವರಿ 6) ಅಭಿಮಾನಿಗಳು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಸೆಲೆಬ್ರೇಷನ್ ಮಾಡಲಾಗಿದೆ.
ಅಭಿಮಾನಿಗಳು ಸಿನಿಮಾ ಪ್ರದರ್ಶನ ಆಗುವಾಗ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಲಾಗಿದೆ. ಇದನ್ನೆಲ್ಲ ಪ್ರಶ್ನಿಸಿದ ಪೊಲೀಸರ ಜೊತೆಗೆ ವಾಗ್ವಾದ ಮಾಡಲಾಗಿದೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಜಿತ್ ಕುಮಾರ್ ಅವರಿಗೆ ಮಾಸ್ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದೆ. ‘ವಿದಾಮುಯರ್ಚಿ’ ಸಿನಿಮಾ ಬಿಡುಗಡೆ ಆಗಿದ್ದಕ್ಕೆ ಎಲ್ಲರೂ ಹುಚ್ಚೆದ್ದು ಕುಣಿದಾಡಿದ್ದಾರೆ. ಥಿಯೇಟರ್ ಒಳಗಡೆ ಪಟಾಕಿ ಸಿಡಿಸುವುದು ನಿಜಕ್ಕೂ ಅಪಾಯದ ಕೆಲಸ. ಸ್ವಲ್ಪ ಹೆಚ್ಚು-ಕಡಿಮೆ ಆದರೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಂಥ ಅಪಾಯವನ್ನೂ ಲೆಕ್ಕಿಸದೇ ಅಜಿತ್ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಪಟಾಕಿ ಹಚ್ಚಿದ್ದಾರೆ.
ಚಿತ್ರಮಂದಿರದ ಒಳಗೆ ಪ್ಯಾನ್ಸ್ ಅತಿರೇಕದ ವರ್ತನೆ ತೋರಿಸಿದಾಗ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹುಚ್ಚಾಟ ನಡೆಸಿದ ಅಭಿಮಾನಿಗಳನ್ನು ಹಿಡಿದುಕೊಳ್ಳಲಾಗಿದೆ. ಆದರೆ ಪೊಲೀಸರ ಜೊತೆಗೇ ಅಜಿತ್ ಅಭಿಮಾನಿಗಳು ಜಗಳ ಮಾಡಿದ್ದಾರೆ.