ಬ್ಯಾಂಕ್​ಗೆ ವಂಚನೆ ಪ್ರಕರಣ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್‌.ಎನ್ ಕೃಷ್ಣಯ್ಯ ಶೆಟ್ಟಿ ಅವರು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಇದೀಗ ಕೋರ್ಟ್​, ಕೃಷ್ಣಯ್ಯ ಶೆಟ್ಟಿ ಮೂರು ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 120ಬಿ, 420, 467, 471 ಸೆಕ್ಷನ್​ಗಳಡಿಯಲ್ಲಿ ಎಂಟಿವಿ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಮುನಿರಾಜು, ಕೆ.ಶ್ರೀನಿವಾಸಗೆ ತಲಾ 1 ಲಕ್ಷ ರೂ. ದಂಡದ ಜೊತೆಗೆ 3 ವರ್ಷ ಶಿಕ್ಷೆ ವಿಧಿಸಿದೆ.

ಆದ್ರೆ, ಕೃಷ್ಣಯ್ಯ ಶೆಟ್ಟಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಕೋರ್ಟ್, ಒಂದು ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿದೆ.

ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೃಷ್ಣಯ್ಯ ಶೆಟ್ಟಿ ಪರ ವಕೀಲ ನಾಗೇಂದ್ರ ನಾಯಕ್ ಅವರು ಕೋರ್ಟ್​ಗೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಒಂದು ತಿಂಗಳ ಕಾಲ ಶಿಕ್ಷೆ ಅಮಾನತ್ತಿನಲ್ಲಿಟ್ಟಿದ್ದು, 5 ಲಕ್ಷ ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸಲು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸೂಚನೆ ನೀಡಿದ್ದಾರೆ. ಅಲ್ಲದೇ ಇದಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದಾರೆ.

ಏನಿದು ಪ್ರಕರಣ?
1993ರಲ್ಲಿ ಬಾಲಾಜಿಕೃಪಾ ಎಂಟರ್‌ಪ್ರೈಸಸ್‌ನ ಮಾಲೀಕರಾಗಿದ್ದ ಕೃಷ್ಣಯ್ಯ ಶೆಟ್ಟಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಹೇಳಿ ವಂಚನೆ ನಡೆಸಿದ್ದರು. ಬಿಟಿಎಸ್, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್, ಐಟಿಐ, ಎಚ್‌ಎಎಲ್, ಬಿಇಎಂಎಲ್, ಎಡಿಇ ಸಂಸ್ಥೆಗಳ 181 ಮಂದಿಗೆ 7.17 ಕೋಟಿ ರೂ.ಬ್ಯಾಂಕ್ ಸಾಲವನ್ನು ನಕಲಿ ದಾಖಲೆ ಸೃಷ್ಟಿಸಿ ಪಡೆದ ಆರೋಪ ಇತ್ತು. ಇದರಲ್ಲಿ 3.53 ಕೋಟಿ ಸಾಲ ತೀರಿಸಿಲ್ಲ ಎಂದು ಸಿಸಿಐ ಆರೋಪಿಸಿತ್ತು. ಮುಖ್ಯ ವಿಚಕ್ಷಣೆ ದಳದ ಮುಖ್ಯಸ್ಥ ಆರ್.ಡಿ.ನಾಯ್ಡು ನೀಡಿರುವ ದೂರು ಆಧರಿಸಿ, ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು.ಬ್ಯಾಂಕ್ ಖಾತೆಗಳು, ಸಾಲ ವಿತರಣೆಯಾದ ಮಾಹಿತಿ ಕಲೆ ಹಾಕಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಅಂದಿನ ಮುಖ್ಯ ವಿಚಕ್ಷಣೆ ದಳದ ಮುಖ್ಯಸ್ಥ ಆರ್.ಡಿ.ನಾಯ್ಡು ನೀಡಿರುವ ದೂರು ಆಧರಿಸಿ, ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು.ಬ್ಯಾಂಕ್ ಖಾತೆಗಳು, ಸಾಲ ವಿತರಣೆಯಾದ ಮಾಹಿತಿ ಕಲೆ ಹಾಕಿ ಸಿಬಿಐ ಚಾರ್ಜ್‌ಶೀಟ್ ಹಾಕಿತ್ತು. ಸಾಲ ಕೊಡಿಸುವಾಗ ನೌಕರರಲ್ಲದವರನ್ನು ನೌಕರರೆಂದು ಸುಳ್ಳು ವೇತನ ರಸೀದಿ, ಪ್ರಮಾಣಪತ್ರ ಕೊಟ್ಟು 263 ಪ್ರಕರಣಗಳಲ್ಲಿ 15.61 ಕೋಟಿ ಸಾಲ ಪಡೆದಿದ್ದು, 33 ಪ್ರಕರಣಗಳಲ್ಲಿ 1.47 ಕೋಟಿ ರೂ.ಬಾಕಿ ಪಾವತಿ ಮಾಡಬೇಕಿದೆ. 181 ಮಂದಿಬೇನಾಮಿ ಹೆಸರಲ್ಲಿ ಯೋಜನೆಯ ಲಾಭ ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ನಗರ ಶಾಖೆಯ ಎಸ್‌ಬಿಎಂನ ವ್ಯವಸ್ಥಾಪಕ ಎಂ.ಟಿ.ವಿ.ರೆಡ್ಡಿ ಇದರಲ್ಲಿ ಶಾಮೀಲಾಗಿದ್ದು,ಒಂದು ಸಾಲ ಬಿಡುಗಡೆಗೆ 20 ಸಾವಿರ ರೂ. ಹಣ ಪಡೆದಿದ್ದಕ್ಕೆ ಸಾಕ್ಷ್ಯ ದೊರೆತಿದೆ. ನಾಗವಾರದ ಬಳಿ ನಿವೇಶನ ಎಂದು ತೋರಿಸಿದ್ದ ಜಾಗ ಮೊದಲೇ ಕೆಐಎಡಿಬಿಗೆ ಸೇರಿದ್ದಾಗಿತ್ತು. ಇದು ವಂಚನೆಗೆ ಕಾರಣ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸುದೀರ್ಫ ಮಾಹಿತಿ ನೀಡಿತ್ತು.

ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಗ್ರಾಮದ ಸರ್ವೇ ನಂಬ‌ರ್ 98ರಲ್ಲಿ 3 ಎಕರೆಗೂ ಹೆಚ್ಚಿನ ಜಾಗದಲ್ಲಿ ಲೇ ಔಟ್ ನಿರ್ಮಾಣಕ್ಕಾಗಿ ಸಾಲ ಪಡೆಯಲಾಗಿತ್ತು. ಈ ಪ್ರದೇಶದಲ್ಲಿ ಗೃಹ ನಿರ್ಮಾಣ ಯೋಜನೆಗೆ ಕೃಷ್ಣಯ್ಯ ಶೆಟ್ಟಿ ಬಾಲಾಜಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ 2003ರಿಂದ 2008ರವರೆಗೆ ಚಾಲ್ತಿ ಖಾತೆಯಲ್ಲಿ ಎಸ್‌ಬಿಎಂನಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ತೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ’ ಎಂಬುದು ಸಿಬಿಐ ಆರೋಪವಾತ್ತು. ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನನ್ನನ್ನು ಕೈ ಬಿಡಬೇಕೆಂದು 2013ರಲ್ಲಿ ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮನವಿ ತಿರಸ್ಕೃತಗೊಂಡಿತ್ತು. ನಂತರ 2023ರಲ್ಲಿ ಕರ್ನಾಟಕ ಹೈಕೋರ್ಟ್ ಸಹ ಡ ಕೃಷ್ಣಯ್ಯಶೆಟ್ಟಿ ಮನವಿಯನ್ನು ತಿರಸ್ಕರಿಸಿತ್ತು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!