Sunday, September 25, 2022

Latest Posts

ಅಖಂಡ ಭಾರತ ಸಂಕಲ್ಪ ದಿನ: ಯಲ್ಲಾಪುರದಲ್ಲಿ ಪಂಜಿನ ಮೆರವಣಿಗೆ

ಹೊಸದಿಗಂತ ವರದಿ,ಯಲ್ಲಾಪುರ:

ತಾಲೂಕಾ ಹಿಂದೂ ಜಾಗರಣೆ ವೇದಿಕೆ ವತಿಯಿಂದ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಪಟ್ಟಣದ ದೇವಿ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪಂಜಿನ ಮೆರವಣಿಗೆ ಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು.
ದೇವಿ ಮೈದಾನದಿಂದ ಹೊರಟ ಮೆರವಣಿಗೆ ಬೆಲ್ ರಸ್ತೆ, ಬಸ್ ನಿಲ್ದಾಣ, ಪ್ರಮುಖ ರಸ್ತೆ ಗಳಲ್ಲಿ ಸಂಚರಿಸಿ ವೆಂಕಟರಮಣ ದೇವಸ್ಥಾನ ದಲ್ಲಿ ಸಂಪನ್ನ ಗೊಂಡಿತು.
ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ರಾದ ಗೋಪಾಲ ಕೃಷ್ಣ ಗಾವಂಕರ್, ಡಾ. ರವಿಭಟ್ ಬರಗದ್ದೆ,ಮುರುಳಿ ಹೆಗಡೆ, ಶಿರೀಷ್ ಪ್ರಭು,ಸೋಮೇಶ್ವರ್ ನಾಯ್ಕ,ಶೃತಿ ಹೆಗಡೆ, ಚಂದ್ರಕಲಾ ಭಟ್, ಸುನೀತಾ ವೇರ್ಣೇಕರ್,ರಾಮು ನಾಯ್ಕ,ರಾಘು ಭಟ್, ಪ್ರಸಾದ ಹೆಗಡೆ ಪ್ರದೀಪ್ ಯಲ್ಲಾಪುರ ಕರ್ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!