ಹೊಸದಿಗಂತ ವರದಿ ಕಲಬುರಗಿ:
ತಮಿಳುನಾಡಿನ ಮುಖ್ಯಮಂತ್ರಿ ಮಗ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ಖಂಡಿಸಿದೆ.
ಹೇಳಿಕೆ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ರವಿ ಲಾತೂರಕರ..ʻಸನಾತನ ಧರ್ಮದವನ್ನು ಡೆಂಘಿ, ಕೋವಿಡ್‌ಗೆ ಹೋಲಿಸಿದ್ದಲ್ಲದೆ, ಆ ರೋಗಗಳನ್ನು ನಾಶ ಮಾಡಿದಂತೆ ಸನಾತನ ಧರ್ಮದವನ್ನು ನಾಶ ಮಾಡಬೇಕು ಎಂಬ ಹೇಳಿಕೆ ವಿವೇಚನೆ ಕಳೆದುಕೊಂಡ ಮತ್ತು ಅಹಂಕಾರದ ಪರಮಾವಧಿʼ ಎಂದರು.
ಸಾವಿರಾರು ವರ್ಷಗಳಿಂದ ದಾಳಿಕೋರರು, ಮತಾಂಧರು, ಅಕ್ರಮಕಾರರಾಗಿ ಬಂದು ನಾಶ ಮಾಡಲು ಪ್ರಯತ್ನಿಸಿದರೂ ನಾಶವಾಗದ ಧರ್ಮ ನಮ್ಮ ಭಾರತೀಯ ಸನಾತನ ಧರ್ಮ. ಕೇವಲ ಪ್ರಚಾರಕ್ಕಾಗಿ ಉದಯನಿಧಿ ಸ್ಟಾಲಿನ್ ಇಂತಹ ಅವಹೇಳನಕಾರಿ ಹೇಳಿಕೆ ಮಾಡಿದ್ಧಾರೆ ಎಂದು ಖಂಡಿಸಿದರು.