ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ.
ಸಾಂಸ್ಕೃತಿಕ ನಗರಿಯಲ್ಲಿ ಈಗಾಗಲೇ ದಸರಾ ವೈಭವ ಮನೆಮಾಡಿದ್ದು, ಇಂದು ಅರಮನೆ ಆವರಣಕ್ಕೆ ಗಜಪಡೆ ಆರಂಭಿಸಿದೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ಗಜನಪಡೆಗೆ ಸಾಂಪ್ರದಾಯಿಂಕ ಸ್ವಾಗತ ದೊರಕಿದೆ. ಕ್ಯಾಪ್ಟನ್ ಅಭಿಮನ್ಯು ಸೇರಿ ಒಟ್ಟಾರೆ 9 ಆನೆಗಳು ಆಗಮಿಸಿವೆ. ಒಟ್ಟಾರೆ 15 ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಗಜಪಡೆಯನ್ನು ಸ್ವಾಗತಿಸಿವೆ. ಇನ್ನು ಆನೆಗಳಿಗೆ ತಯಾರಿ ನೀಡಲಾಗುವುದು.